ನವದೆಹಲಿ: ಕಣಿವೆ, ದುರ್ಗಮ ಹಾದಿ, ಯಾವುದೇ ಸಾರಿಗೆ ಸೌಕರ್ಯಗಳಿಲ್ಲದ ಜನವಸತಿ ಪ್ರದೇಶಗಳಿಗೆ ತ್ವರಿತಗತಿಯಲ್ಲಿ ಅಗತ್ಯ ವಸ್ತುಗಳನ್ನು ಪೂರೈಸಲು ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆ (ಐಟಿಬಿಪಿ) ಡ್ರೋನ್ ಆಧಾರಿತ ಲಾಜಿಸ್ಟಿಕ್ಸ್ ಸೇವೆ ಆರಂಭಿಸಿದೆ.
ಪ್ರತಿಕೂಲ ಹವಾಮಾನ, ಮೇಘ ಸ್ಫೋಟ, ಪ್ರವಾಹ ಹಾಗೂ ಇನ್ನಿತರ ತುರ್ತು ಸಂದರ್ಭಗಳಲ್ಲಿ ಕಣಿವೆ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಆಹಾರ, ಔಷಧ ಪೂರೈಸಲು ಡ್ರೋನ್ ಲಾಜಿಸ್ಟಿಕ್ಸ್ ಅನ್ನು ಆರಂಭಿಸಿದೆ.
ಐಟಿಬಿಪಿಯ ಈ ಡ್ರೋನ್ ಆಧಾರಿತ ಲಾಜಿಸ್ಟಿಕ್ ಸೇವೆಯನ್ನು ಆರಂಭಿಸಿರುವುದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿನಂದನೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಿದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.