ನವದೆಹಲಿ: ಪ್ರಸಾರ ಭಾರತಿಯು ತನ್ನ ರೇಡಿಯೊ ಸೇವೆಗಳಲ್ಲಿ ‘ಆಲ್ ಇಂಡಿಯಾ ರೇಡಿಯೊ’ (ಎಐಆರ್) ಬದಲು ‘ಆಕಾಶವಾಣಿ’ ಎಂದು ಉಲ್ಲೇಖಿಸಲು ನಿರ್ಧರಿಸಿದೆ.
ಎಐಆರ್ ಅನ್ನು ಆಕಾಶವಾಣಿ ಎಂದು ಬದಲಿಸಿರುವ ಶಾಸನಬದ್ಧ ನಿಬಂಧನೆಯು ತಕ್ಷಣದಿಂದ ಜಾರಿಯಾಗಬೇಕು ಎಂದು ಆಕಾಶವಾಣಿ ಮಹಾನಿರ್ದೇಶಕಿ ವಸುಧಾ ಗುಪ್ತಾ ಅವರು ಹೊರಡಿಸಿರುವ ಆಂತರಿಕ ಆದೇಶದಲ್ಲಿ ಹೇಳಲಾಗಿದೆ.
‘ಇದು ಸರ್ಕಾರದ ತುಂಬಾ ಹಿಂದಿನ ನಿರ್ಧಾರವಾಗಿದ್ದು, ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ನಾವು ಜಾರಿಗೆ ತರುತ್ತಿದ್ದೇವೆ’ ಎಂದು ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ದ್ವಿವೇದಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.