ADVERTISEMENT

J&K Assembly Election: ಮೊದಲ ಬಾರಿ ಮತ ಚಲಾಯಿಸಿದ ವಾಲ್ಮೀಕಿ ಸಮುದಾಯದ ಜನ

ಪಿಟಿಐ
Published 1 ಅಕ್ಟೋಬರ್ 2024, 6:41 IST
Last Updated 1 ಅಕ್ಟೋಬರ್ 2024, 6:41 IST
<div class="paragraphs"><p>ವಾಲ್ಮೀಕಿ ಸಮುದಾಯದ ಜನರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ಸಂತಸಪಟ್ಟರು</p></div>

ವಾಲ್ಮೀಕಿ ಸಮುದಾಯದ ಜನರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ಸಂತಸಪಟ್ಟರು

   

ಪಿಟಿಐ ಚಿತ್ರ

ಶ್ರೀನಗರ:‌ ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಇದೇ ಮೊದಲ ಬಾರಿಗೆ ವಾಲ್ಮೀಕಿ ಸಮುದಾಯದ ಸದಸ್ಯರು ಮಂಗಳವಾರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದರು.

ADVERTISEMENT

ವಾಲ್ಮೀಕಿ ಸಮುದಾಯದವರನ್ನು 1957ರಲ್ಲಿ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಿಂದ ಜಮ್ಮು ಕಾಶ್ಮೀರಕ್ಕೆ ಸ್ವಚ್ಛತಾ ಕೆಲಸಕ್ಕಾಗಿ ಕರೆತರಲಾಗಿತ್ತು.

ಮೊದಲ ಬಾರಿಗೆ ಹಕ್ಕು ಚಲಾಯಿಸಿ ಹಲವರು ಸಂತಸ ವ್ಯಕ್ತಪಡಿಸಿದರು. ‘ನನ್ನ 45 ವರ್ಷಗಳ ಜೀವನದಲ್ಲಿ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಚುನಾವಣೆಯಲ್ಲಿ ಮತಚಲಾಯಿಸಿದ್ದೇನೆ. ಇದೊಂದು ಹಬ್ಬದಂತೆ ಭಾಸವಾಗುತ್ತಿದೆ. ನಮ್ಮ ಸಮುದಾಯದ ಜನರು ಸುಮಾರು ಎರಡು ತಲೆಮಾರುಗಳಿಂದ ಮತದಾನದ ಹಕ್ಕುಗಳಿಲ್ಲದೆ ಬದುಕಿದ್ದಾರೆ. ಆದರೆ 370ನೇ ವಿಧಿಯಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ನಮಗೂ ನ್ಯಾಯ ದೊರಕಿದೆ. ಒಂದು ಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರದ ನ್ಯಾಯ ಮತ್ತು ಸಾಂವಿಧಾನಿಕ ಚೌಕಟ್ಟಿನಲ್ಲಿ ಕಪ್ಪು ಚುಕ್ಕೆಯಾಗಿದ್ದೆವು. 75 ವರ್ಷಗಳ ನಂತರ ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಭಾಗವಾಗಿ ವಾಲ್ಮೀಕಿ ಸಮಾಜ, ಪಾಕಿಸ್ತಾನದ ನಿರಾಶ್ರಿತರು ಹಾಗೂ ಗೂರ್ಖಾ ಸಮುದಾಯದವರು ಹಕ್ಕು ಪಡೆದುಕೊಳ್ಳಲು ಸಾಧ್ಯವಾಯಿತು’ ಎಂದು ಘಾರು ಭಾಟಿ ಎನ್ನುವವರು ಖುಷಿ ಹಂಚಿಕೊಂಡಿದ್ದಾರೆ.

‘ಈ ಹಿಂದೆ ಸರಿಸುಮಾರು 12 ಸಾವಿರ ಜನರು ಮತದಾನದ ಹಕ್ಕು, ಶಿಕ್ಷಣ, ಉದ್ಯೋಗಾವಕಾಶ ಮತ್ತು ಭೂ ಮಾಲೀಕತ್ವದಿಂದ ವಂಚಿತರಾಗಿದ್ದರು. ಆದರೆ ಈಗ ಭೂಮಿ ಖರೀದಿಸಬಹುದು, ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬಹುದು, ಚುನಾವಣೆಗಳಲ್ಲಿ ಭಾಗವಹಿಸಬಹುದು. ವಾಲ್ಮೀಕಿ ಸಮುದಾಯದ ಜನರು ಪರ್ಯಾಯ ಜೀವನೋಪಾಯಗಳನ್ನು ಹುಡುಕಬಹುದು’ ಎಂದೂ ಅಭಿಪ್ರಾಯ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.