ADVERTISEMENT

ಸುಕೇಶ್ ಚಂದ್ರಶೇಖರ್ ವಂಚನೆ ಪ್ರಕರಣ: ಇ.ಡಿ ವಿಚಾರಣೆ ಎದುರಿಸಿದ ಜಾಕ್ವೆಲಿನ್

ಪಿಟಿಐ
Published 27 ಜೂನ್ 2022, 11:36 IST
Last Updated 27 ಜೂನ್ 2022, 11:36 IST
ಜಾಕ್ವೆಲಿನ್ ಫರ್ನಾಂಡಿಸ್
ಜಾಕ್ವೆಲಿನ್ ಫರ್ನಾಂಡಿಸ್   

ನವದೆಹಲಿ:ವಂಚನೆ ಆರೋಪ ಎದುರಿಸುತ್ತಿರುವ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ಹಾಗೂ ಇತರರಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸೋಮವಾರ ಜಾರಿ ನಿರ್ದೇಶನಾಲಯದ(ಇ.ಡಿ) ವಿಚಾರಣೆಗೆ ಹಾಜರಾದರು.

ಇದೇ ಪ್ರಕರಣ ಸಂಬಂಧ ಜಾಕ್ವೆಲಿನ್ ಅವರನ್ನು 2-3 ಬಾರಿ ವಿಚಾರಣೆ ನಡೆಸಿರುವ ಇ.ಡಿ ಅಧಿಕಾರಿಗಳು,ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ಎ) ಅಡಿ ಅವರ ₹7.27 ಕೋಟಿಯನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆದಿದ್ದಾರೆ.

ಸುಲಿಗೆ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಗಳ ಮೂಲಕ ಸಂಗ್ರಹಿಸಲಾದ ಹಣದಿಂದ ಸುಕೇಶ್ ಚಂದ್ರಶೇಖರ್ ಅವರು, ಜಾಕ್ವೆಲಿನ್ ಅವರಿಗೆ 5.71 ಕೋಟಿ ಮೌಲ್ಯದ ಉಡುಗೊರೆಗಳನ್ನು ನೀಡಿದ್ದರು. ಈ ಉಡುಗೊರೆಗಳನ್ನು ಜಾಕ್ವೆಲಿನ್ ಅವರಿಗೆ ನೀಡಲು ಚಂದ್ರಶೇಖರ್ ತನ್ನ ಸುದೀರ್ಘ ಅವಧಿಯ ಸ್ನೇಹಿತೆ ಮತ್ತು ಈ ಪ್ರಕರಣದ ಸಹ ಆರೋಪಿ ಪಿಂಕಿ ಇರಾನಿಯನ್ನು ಬಳಸಿಕೊಂಡಿದ್ದರು.ಇಷ್ಟೇ ಅಲ್ಲದೆ, ಜಾಕ್ವೆಲಿನ್ ಅವರ ಕುಟುಂಬದ ಆತ್ಮೀಯರಿಗೆ ಅಂತರರಾಷ್ಟ್ರೀಯ ಹವಾಲ ಆಪರೇಟರ್ ಅವತಾರ್ ಸಿಂಗ್ ಕೊಚ್ಚಾರ್ ಮೂಲಕ 1.3 ಕೋಟಿ ಮೌಲ್ಯದ ಡಾಲರ್, 14 ಲಕ್ಷ ಮೌಲ್ಯದ ಆಸ್ಟ್ರೇಲಿಯಾದ ಡಾಲರ್ ಅನ್ನು ಸುಕೇಶ್ ನೀಡಿದ್ದರು ಎಂದು ಇ.ಡಿ ಹೇಳಿಕೆಯಲ್ಲಿ ತಿಳಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.