ADVERTISEMENT

ಲಡ್ಡು ವಿವಾದ: ತಿರುಪತಿ ಪ್ರವಾಸ ರದ್ದುಗೊಳಿಸಿದ ಮಾಜಿ ಸಿಎಂ ಜಗನ್

ಪಿಟಿಐ
Published 27 ಸೆಪ್ಟೆಂಬರ್ 2024, 14:33 IST
Last Updated 27 ಸೆಪ್ಟೆಂಬರ್ 2024, 14:33 IST
<div class="paragraphs"><p>ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ</p></div>

ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ

   

ಅಮರಾವತಿ: ತಿರುಪತಿಯ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡುವ ತನ್ನ ಕಾರ್ಯಕ್ರಮವನ್ನು ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ.ಎಸ್‌.ಜಗನ್‌ ಮೋಹನ್‌ ರೆಡ್ಡಿ ರದ್ದುಗೊಳಿಸಿದ್ದಾರೆ.

ಲಡ್ಡು ಪ್ರಕರಣದಲ್ಲಿ ಗುರಿಯಾಗಿರುವ ಜಗನ್ ಅವರಿಗೆ ಪೊಲೀಸರು ನೋಟಿಸ್ ನೀಡಲಿದ್ದಾರೆ ಎಂಬುದೇ ಇದಕ್ಕೆ ಕಾರಣ ಎನ್ನಲಾಗಿದೆ.

ADVERTISEMENT

ಪಿಟಿಐ ಜಗನ್ ಅವರು ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡುವ ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ ಎಂದು ಅವರ ಸಮೀಪವರ್ತಿಗಳು ತಿಳಿಸಿದ್ದಾರೆ.

ಪ್ರವಾಸ ರದ್ದುಪಡಿಸಿದ್ದಕ್ಕೆ ರೆಡ್ಡಿ ಅವರು ಯಾವುದೇ ಕಾರಣ ತಿಳಿಸಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ದೇವಾಲಯ ಪ್ರವೇಶಕ್ಕೂ ಮುನ್ನ ಜಗನ್‌ ಅವರು ತಮ್ಮ ಶ್ರದ್ಧೆಯನ್ನು ಘೋಷಿಸಬೇಕು ಎಂದು ಎನ್‌ಡಿಎ ನಾಯಕರು ಆಗ್ರಹಿಸಿದ ಬೆನ್ನಲ್ಲೇ ಜಗನ್‌ ಪ್ರವಾಸ ರದ್ದಾಗಿದೆ.

ಏತನ್ಮಧ್ಯೆ ತಿರುಪತಿ ಪ್ರಸಾದವಾದ ಲಾಡುಗಳನ್ನು ಸಿದ್ಧಪಡಿಸಲು ಪೂರೈಕೆಯಾಗಿದ್ದ ಕಲಬೆರಕೆ ತುಪ್ಪ ವಿವಾದ ಕುರಿತು ತನಿಖೆ ನಡೆಸಲು ಆಂಧ್ರ ಪ್ರದೇಶ ಸರ್ಕಾರ ಇಂದು ಒಂಬತ್ತು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.