ADVERTISEMENT

ಸಾವಿರ ರೂಪಾಯಿಗೆ 1 ಎಕರೆಯಂತೆ 42 ಎಕರೆ ಭೂಮಿ ಪಡೆದಿರುವ ವೈಎಸ್‌ಆರ್‌ಸಿಪಿ: ಟಿಡಿಪಿ

ಪಿಟಿಐ
Published 23 ಜೂನ್ 2024, 13:49 IST
Last Updated 23 ಜೂನ್ 2024, 13:49 IST
<div class="paragraphs"><p>ನಾರಾ ಲೋಕೇಶ್ ಎಕ್ಸ್ ಖಾತೆಯ ಚಿತ್ರ</p></div>

ನಾರಾ ಲೋಕೇಶ್ ಎಕ್ಸ್ ಖಾತೆಯ ಚಿತ್ರ

   

ಎಕರೆಗೆ ₹1 ಸಾವಿರದಂತೆ 42 ಎಕರೆ ಭೂಮಿ ಲೀಸ್‌ಗೆ ಪಡೆದಿರುವ ವೈಎಸ್‌ಆರ್‌ಸಿಪಿ: ಟಿಡಿಪಿ

ಅಮರಾವತಿ: ಆಂಧ್ರ ಪ್ರದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ವೈ.ಎಸ್‌. ಜಗನ್ ಮೋಹನ ರೆಡ್ಡಿ ನೇತೃತ್ವದ ಸರ್ಕಾರವು ವೈಎಸ್‌ಆರ್‌ಸಿಪಿ ಪಕ್ಷದ ಕಚೇರಿಗಳನ್ನು ನಿರ್ಮಿಸಲು 26 ಜಿಲ್ಲೆಗಳಲ್ಲಿ 42 ಎಕರೆ ಮಂಜೂರು ಮಾಡಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ನಾರಾ ಲೋಕೇಶ್ ಆರೋಪಿಸಿದ್ದಾರೆ.

ADVERTISEMENT

ಈ ಭೂಮಿಯನ್ನು ಎಕರೆಗೆ ನಾಮಮಾತ್ರ ಬೆಲೆ ₹1,000 ನಂತೆ 33 ವರ್ಷಕ್ಕೆ ಲೀಸ್‌ಗೆ ಕೊಡಲಾಗಿದೆ ಎಂದೂ ದೂರಿದ್ದಾರೆ.

‘ವೈಎಸ್‌ಆರ್‌ಸಿಪಿ ಕಚೇರಿಗಳಿಗಾಗಿ ರಾಜ್ಯದ 26 ಜಿಲ್ಲೆಗಳಲ್ಲಿ 42 ಎಕರೆ ಭೂಮಿಯನ್ನು ಜಗನ್, ಎಕರೆಗೆ ಅತ್ಯಂತ ಕನಿಷ್ಠ ₹1,000 ದಂತೆ ಲೀಸ್‌ಗೆ ನೀಡಿದ್ದಾರೆ’ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ನಾರಾ ಲೋಕೇಶ್ ಆರೋಪಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವೈಎಸ್‌ಆರ್‌ಸಿ‍ಪಿ ಕಚೇರಿಯ ನಿರ್ಮಾಣ ಹಂತದ ಕಟ್ಟಡಗಳ ಚಿತ್ರಗಳನ್ನೂ ಅವರು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ತಾಡೆಪಲ್ಲಿಯಲ್ಲಿ ನಿರ್ಮಿಸಲಾಗುತ್ತಿದ್ದ ವೈಎಸ್‌ಆರ್‌ಸಿಪಿ ಪಕ್ಷದ ಕೇಂದ್ರ ಕಚೇರಿ ಕಟ್ಟಡವನ್ನು ಕೆಡವಲಾಗಿದ್ದು, ವಿಶಾಖಪಟ್ಟಣದ ರುಶಿಕೊಂಡದಲ್ಲಿ ಜಗನ್‌ಗಾಗಿ ₹500 ಕೋಟಿ ವೆಚ್ಚದಲ್ಲಿ ಅರಮನೆಯಂತಹ ಭವನವನ್ನು ನಿರ್ಮಿಸಲಾಗಿದೆ ‌ಎಂಬ ವಿಷಯ ಬಹಿರಂಗಗೊಂಡ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ.

ಸಮುದ್ರದ ಬಳಿ ಇರುವ ಈ ಭವನದಲ್ಲಿ ಇಟಾಲಿಯನ್ ಮಾರ್ಬಲ್, 200 ಅಲಂಕಾರಿಕ ಐಷಾರಾಮಿ ವಿದ್ಯುತ್ ದೀಪಗಳು, 12 ಬೆಡ್‌ರೂಮ್‌ಗಳು ಸೇರಿದಂತೆ ಇತರೆ ಐಷಾರಾಮಿ ಸೌಲಭ್ಯಗಳಿವೆ. ಸೀ ವ್ಯೂ ಭವನವು ಮಾಜಿ ಸಿಎಂ ಜಗನ್ ಅವರ ನಿವಾಸವಾಗಿದೆ ಎಂಬ ಆರೋಪವಿದೆ. ವೈಎಸ್‌ಆರ್‌ಸಿಪಿ ಸರ್ಕಾರ ಅಧಿಕಾರ ಕಳೆದುಕೊಂಡು ಟಿಡಿಪಿ ಅಧಿಕಾರಕ್ಕೆ ಬಂದ ಬಳಿಕ ಈ ಭವನವು ರಾಷ್ಟ್ರೀಯ ಮಟ್ಟದಲ್ಲಿ ಗಮನ ಕೇಂದ್ರೀಕರಿಸಿದೆ.

ಸುಮಾರು ₹600 ಕೋಟಿ ಬೆಲೆಬಾಳುವ 42 ಎಕರೆ ಭೂಮಿಯ ಹಣದಲ್ಲಿ 4,200 ಬಡ ರೈತರಿಗೆ ಭೂಮಿ ಖರೀದಿಸಿ ನೀಡಬಹುದಿತ್ತು. ರುಶಿಕೊಂಡ ಭವನಕ್ಕೆ ಖರ್ಚು ಮಾಡಿರುವ ಹಣದಲ್ಲಿ 25,000 ಬಡವರಿಗೆ ಮನೆ ಕಟ್ಟಿಸಿಕೊಡಬಹುದಿತ್ತು ಎಂದು ಲೋಕೇಶ್ ಹೇಳಿದ್ದಾರೆ. ತಾಡೆಪಲ್ಲಿ ಅಕ್ರಮ ಕಟ್ಟಡ ಕೆಡವುದರ ಮೂಲಕ ಅನೇಕ ಅಕ್ರಮ ಕಟ್ಟಡಗಳ ಬಣ್ಣ ಬಯಲಾಗಿದೆ ಎಂದೂ ಅವರು ಆರೋಪಿಸಿದ್ದಾರೆ. ವೈಎಸ್‌ಆರ್‌ಸಿಪಿ ಕಚೇರಿಗಳು ಎನ್ನಲಾದ 19 ನಿರ್ಮಾಣ ಹಂತದ ಕಟ್ಟಡಗಳ ಚಿತ್ರಗಳನ್ನು ಟಿಡಿಪಿ ಎಲ್ಲೆಡೆ ಹಂಚಿಕೆ ಮಾಡಿದೆ.

ಪಕ್ಷದ ಕಚೇರಿಗಳ ನಿರ್ಮಾಣದ ನೆಪದಲ್ಲಿ 26 ಜಿಲ್ಲೆಗಳ ಪ್ರಮುಖ ಸ್ಥಳಗಳಲ್ಲಿ ನೂರಾರು ಕೋಟಿ ಬೆಲೆಯ ಭೂಮಿಯನ್ನು ವೈಎಸ್‌ಆರ್‌ಸಿಪಿ ಹೇಗೆ ಕಬಳಿಕೆ ಮಾಡಿದೆ ಎಂಬ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಟಿಡಿಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಒಟ್ಟಾರೆ ವೈಎಸ್‌ಆರ್‌ಸಿಪಿ ಪಕ್ಷದ ಕಚೇರಿಗೆ ಪಡೆದಿರುವ ಭೂಮಿ ಮತ್ತು ನಿರ್ಮಾಣ ವೆಚ್ಚ ಸುಮಾರು ₹2,000 ಕೋಟಿ ಎಂದು ಅಂದಾಜಿಸಲಾಗಿದೆ.

ಈ ಮಧ್ಯೆ, ಎಕ್ಸ್ ಪೋಸ್ಟ್ ಮೂಲಕ ಟಿಡಿಪಿಗೆ ತಿರುಗೇಟು ನೀಡಿರುವ ವೈಎಸ್‌ಆರ್‌ಸಿಪಿ, 2014ರಿಂದ 2019ರ ನಡುವೆ ಸಾವಿರಾರು ಕೋಟಿ ಬೆಲೆ ಬಾಳುವ ಭೂಮಿಯನ್ನು ಟಿಡಿಪಿಗೆ ಮಂಜೂರು ಮಾಡಲಾಗಿದೆ ಎಂದು ದೂರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.