ADVERTISEMENT

ಮೇವು ಹಗರಣ: 16 ಅಪರಾಧಿಗಳಿಗೆ ಜೈಲು ಶಿಕ್ಷೆ

ಪಿಟಿಐ
Published 29 ಮೇ 2019, 19:31 IST
Last Updated 29 ಮೇ 2019, 19:31 IST
   

ರಾಂಚಿ: ಮೇವು ಹಗರಣದ 16 ಮಂದಿ ಅಪರಾಧಿಗಳಿಗೆ ಮೂರರಿಂದ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿದೆ.

1990ರಲ್ಲಿ ಚಾಯಿಬಾಸಾ ಖಜಾನೆಯಿಂದ ₹37 ಕೋಟಿ ಅಕ್ರಮವಾಗಿ ಪಡೆದ ಆರ್‌ಸಿ 20ಎ/96ಪ್ರಕರಣಕ್ಕೆ ಸಂಬಂಧಿಸಿ ಈ ಶಿಕ್ಷೆ ವಿಧಿಸಲಾಗಿದೆ. ಅಪರಾಧಿಗಳಿಗೆ ಜೈಲು ಶಿಕ್ಷೆ ಜತೆಗೆ ₹25,000 ದಿಂದ ₹7 ಲಕ್ಷದವರೆಗೆ ದಂಡ ವಿಧಿಸಲಾಗಿದೆ ಎಂದು ಸರ್ಕಾರಿ ವಕೀಲ ಸಂಜಯ್‌ ಕುಮಾರ್‌ ತಿಳಿಸಿದ್ದಾರೆ.

ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್‌ ಸೇರಿ 44 ಅಪರಾಧಿಗಳಿಗೆ 2013ರಲ್ಲಿ ಶಿಕ್ಷೆ ವಿಧಿಸಲಾಗಿದೆ. ಲಾಲು ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಕೈಬಿಟ್ಟಿದ್ದ 20 ಮಂದಿ ವಿರುದ್ಧ ಪೂರಕ ಆರೋಪಪಟ್ಟಿಯನ್ನು ಸಿಬಿಐ ಸಲ್ಲಿಸಿತ್ತು. ಚಾಯಿಬಾಸಾ ಖಜಾನೆಯ ಮಾಜಿ ಸಿಬ್ಬಂದಿ ಲಾಲ್‌ ಮೋಹನ್‌ ಗೋಪ್‌, ಭರತ್‌ ನಾರಾಯಣ್‌ ದಾಸ್‌, ಸಹದೇವ್‌ ಪ್ರಸಾದ್‌ ಸೇರಿ 16 ಅಪರಾಧಿಗಳಿಗೆಈಗ ಶಿಕ್ಷೆ ನೀಡಲಾಗಿದೆ. ಉಳಿದ ನಾಲ್ವರಲ್ಲಿ ಒಬ್ಬರು ತಲೆಮರೆಸಿಕೊಂಡಿದ್ದು, ಮೂವರು ನಿಧನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.