ADVERTISEMENT

ನೇಪಾಳ ಗಡಿಯಿಂದ ಜೈಷ್‌ ಉಗ್ರರ ಪ್ರವೇಶ ಸಾಧ್ಯತೆ: ಗುಪ್ತಚರ ಇಲಾಖೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 14:59 IST
Last Updated 29 ಜೂನ್ 2020, 14:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ: ಭಾರತ– ನೇಪಾಳ ಗಡಿ ಮೂಲಕ ಜೈಷ್‌–ಎ–ಮೊಹಮ್ಮದ್ ಉಗ್ರರು ದೇಶದೊಳಗೆ ಪ್ರವೇಶಿಸುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಬಿಹಾರ ಪೊಲೀಸ್‌ನ ವಿಶೇಷ ದಳ ಗಡಿಯುದ್ದಕ್ಕೂ ಕಟ್ಟೆಚ್ಚರ ವಹಿಸಿದೆ.

‘ಬಿಹಾರದ ಉತ್ತರ ಭಾಗದ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ.ಜೈಷ್‌ ಮತ್ತು ತಾಲಿಬಾನ್‌ನ 20ರಿಂದ 25 ಉಗ್ರರ ಗುಂಪು ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು 5–6 ಗುಂಪು ನೇಪಾಳ ಗಡಿ ಮೂಲಕ ಪ‍್ರವೇಶಿಸುವ ಸಾಧ್ಯತೆ ಇದೆ’ ಎಂಬ ಎಚ್ಚರಿಕೆ ನೀಡಲಾಗಿದೆ.

‘ಬಿಹಾರದ ಐಜಿ, ಡಿಐಜಿ, ಎಸ್‌ಪಿಗಳು ಗಡಿಯಲ್ಲಿ ಗಸ್ತನ್ನು ಹೆಚ್ಚಿಸಬೇಕು ಮತ್ತು ಓಡಾಡುವ ಜನರ ಮೇಲೆ ನಿಗಾ ಇಡಬೇಕು’ ಎಂಬಮಾಹಿತಿ ಇರುವ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ADVERTISEMENT

ಬಿಹಾರ್‌– ನೇಪಾಳ ಗಡಿಯ ರಾಕ್ಸೌಲ್‌ನಲ್ಲಿ ಇಂಡಿಯನ್‌ ಮುಜಾಯಿದ್ದೀನ್‌ ಉಗ್ರ ಯಾಸೀನ್‌ ಭಟ್ಕಳ್‌ನನ್ನು 2013ರಲ್ಲಿ ಬಿಹಾರ ಪೊಲೀಸರು ಬಂಧಿಸಿದ್ದರು. ಇದೇ ಗಡಿಯಲ್ಲಿ ಈತನ ಸಹಚರ ಅಸಾದುಲ್ಲಾ ಅಖ್ತರ್‌ ಸಿಕ್ಕಿಬಿದ್ದಿದ್ದನು. ಇವರಿಬ್ಬರೂ ದೆಹಲಿ, ವಾರಾಣಸಿ, ಪುಣೆ, ಬೆಂಗಳೂರು ಮತ್ತು ಹೈದರಾಬಾದ್‌ ಬಾಂಬ್‌ ಸ್ಫೋಟಗಳಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.