ADVERTISEMENT

ತಮಿಳುನಾಡಿನಲ್ಲಿ ವರ್ಷದ ಮೊದಲ ಜಲ್ಲಿಕಟ್ಟು

ಪಿಟಿಐ
Published 8 ಜನವರಿ 2023, 10:06 IST
Last Updated 8 ಜನವರಿ 2023, 10:06 IST
   

ಚೆನ್ನೈ: ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯಲ್ಲಿ ಹೋರಿ ಕಟ್ಟಿ ಹಾಕುವ ವರ್ಷದ ಮೊದಲ ಜಲ್ಲಿಕಟ್ಟು ಕ್ರೀಡೆಗೆ ಭಾನುವಾರ ಸಂಭ್ರಮ ಚಾಲನೆ ದೊರೆಯಿತು.

ಪುದುಕ್ಕೊಟ್ಟೈನ ತಚ್ಚಂಕುರಿಚಿ ಗ್ರಾಮದಲ್ಲಿ ಬೆಳಿಗ್ಗೆಯಿಂದಲೇ ಸಾವಿರಾರು ಜನ ಉತ್ಸಾಹದಿಂದ ವರ್ಷದ ಮೊದಲ ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗಿಯಾದರು. 300 ಕ್ಕೂ ಹೆಚ್ಚು ಹೋರಿಗಳನ್ನು ಒಂದರ ನಂತರ ಒಂದರಂತೆ ಕ್ರೀಡಾ ಅಖಾಡಕ್ಕೆ ಇಳಿಸಲಾಗಿದ್ದು, 350 ಮಂದಿ ಓಡುತ್ತಿರುವ ಹೋರಿ ಹಿಡಿಯಲು ಪೈಪೋಟಿ ನಡೆಸಿದರು.

ಸಚಿವರಾದ ಶಿವ ವಿ ಮೆಯ್ಯನಾಥನ್ ಮತ್ತು ಎಸ್ ರೇಗುಪತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಿದರು.

ADVERTISEMENT

ಗೆಲ್ಲುವ ಹೋರಿಗಳು ಮತ್ತು ಅದನ್ನು ಪಳಗಿಸುವವರಿಗೆ ಮೋಟಾರ್‌ಸೈಕಲ್, ಕುಕ್ಕರ್‌ ಸೇರಿದಂತೆ ಹಲವು ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಕ್ರೀಡೆಗೆ ಅನುಮತಿ ನೀಡುವ ಮುನ್ನ ಅಧಿಕಾರಿಗಳು ಭದ್ರತೆ ಮತ್ತು ಸುರಕ್ಷತಾ ಅಂಶಗಳು ಸೇರಿದಂತೆ ವ್ಯವಸ್ಥೆಯನ್ನು ಪರಿಶೀಲಿಸಿದ್ದರು.

ತಮಿಳುನಾಡಿನ ಜನಪ್ರಿಯವಾದ ದೇಸಿ ಕ್ರೀಡೆ ಜಲ್ಲಿಕಟ್ಟನ್ನು ಹಿಂಸೆಯ ಕಾರಣದಿಂದ ಸುಪ್ರೀಂಕೋರ್ಟ್‌ ಕೆಲಕಾಲ ನಿಷೇಧಿಸಿತ್ತು. ತಮಿಳುನಾಡು ಸರ್ಕಾರ ಕಾನೂನು ಸಮರ ಮತ್ತು ಪ್ರತಿಭಟನೆಗಳ ಬಳಿಕ ಕ್ರೀಡೆಯನ್ನು ಉಳಿಸಿಕೊಂಡಿದ್ದು, ಪ್ರತಿ ವರ್ಷ ಸಂಭ್ರಮದಿಂದ ಕ್ರೀಡೆಯನ್ನು ನಡೆಸಲಾಗುತ್ತಿದೆ. ತಮಿಳುನಾಡು ಸರ್ಕಾರ ಸುರಕ್ಷತೆ ದೃಷ್ಟಿಯಿಂದ ಇತ್ತೀಚೆಗೆ ಜಲ್ಲಿಕಟ್ಟು ಕಾರ್ಯಕ್ರಮಗಳಿಗೆ ವಿಸ್ತಾರವಾದ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.