ADVERTISEMENT

ಜಾಲ್ನಾ –ಮುಂಬೈ ವಂದೇ ಭಾರತ್ ರೈಲಿನ ಬ್ರೇಕ್ ವ್ಯವಸ್ಥೆಯಲ್ಲಿ ದೋಷ: ಸಂಚಾರ ವಿಳಂಬ

ಪಿಟಿಐ
Published 16 ಜನವರಿ 2024, 8:28 IST
Last Updated 16 ಜನವರಿ 2024, 8:28 IST
<div class="paragraphs"><p>ವಂದೇ ಭಾರತ್ ಎಕ್ಸ್‌ಪ್ರೆಸ್</p></div>

ವಂದೇ ಭಾರತ್ ಎಕ್ಸ್‌ಪ್ರೆಸ್

   

ಮುಂಬೈ: ಮಹಾರಾಷ್ಟ್ರದ ಜಾಲ್ನಾದಿಂದ ಮುಂಬೈಗೆ ಸಂಚರಿಸುತ್ತಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಬ್ರೇಕ್ ವ್ಯವಸ್ಥೆಯಲ್ಲಿ ದೋಷ ಕಂಡು ಬಂದಿದ್ದು, ಸುಮಾರು 30 ನಿಮಿಷ ವಿಳಂಬ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದೆ.

ADVERTISEMENT

ಮುಂಬೈನಿಂದ 75 ಕಿ.ಮಿ ದೂರದಲ್ಲಿ ಇರುವ ಅಸಾಂಗಾವ್‌ನಲ್ಲಿ ರೈಲು ಕೆಟ್ಟು ನಿಂತಿತ್ತು. ತಾಂತ್ರಿಕ ದೋಷವನ್ನು ಸರಿಪಡಿಸಿದ ಬಳಿಕ ಸುಮಾರು 11.25ರ ಹೊತ್ತಿಗೆ ರೈಲು ಸಂಚಾರ ಪುನಾರಂಭಿಸಿತು ಎಂದು ಅವರು ತಿಳಿಸಿದ್ದಾರೆ.

‘ಬೆಳಿಗ್ಗೆ ಸುಮಾರು 11 ಗಂಟೆ ವೇಳೆಗೆ ಬ್ರೇಕಿಂಗ್ ವ್ಯವಸ್ಥೆಯಲ್ಲಿ ದೋಷ ಕಂಡು ಬಂತು. ಬಳಿಕ 11.25ರ ವೇಳೆಗೆ, ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಮುಂಬೈಗೆ ತೆರಳಿತು’ ಎಂದು ಕೇಂದ್ರ ರೈಲ್ವೆಯ ಅಧಿಕಾರಿ ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ 29ರಂದು ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಜನವರಿ 1ರಿಂದ ಕಾರ್ಯಾಚರಣೆ ಆರಂಭವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.