ADVERTISEMENT

ಲೈಂಗಿಕ ದೌರ್ಜನ್ಯ ಆರೋಪ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಪ್ರೊಫೆಸರ್ ಅಮಾನತು

ಪಿಟಿಐ
Published 17 ಜುಲೈ 2024, 15:46 IST
Last Updated 17 ಜುಲೈ 2024, 15:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಪ್ರೊಫೆಸರ್ ಒಬ್ಬರನ್ನು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಸೇವೆಯಿಂದ ಅಮಾನತುಗೊಳಿಸಿದೆ. ಅಲ್ಲದೆ, ಅವರ ವಿರುದ್ಧದ ತನಿಖೆಯನ್ನು ವಿಶ್ವವಿದ್ಯಾಲಯದ ಆಂತರಿಕ ದೂರುಗಳ ಸಮಿತಿಗೆ ವಹಿಸಿ ಆದೇಶಿಸಲಾಗಿದೆ. 

ನಾಲ್ವರು ಪಿಎಚ್‌.ಡಿ ವಿದ್ಯಾರ್ಥಿನಿಯರು ಅಮಾನತುಗೊಂಡಿರುವ ಪ್ರೊಫೆಸರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಈ ಪೈಕಿ ಒಬ್ಬ ವಿದ್ಯಾರ್ಥಿನಿಯು ತಮ್ಮ ದಾಖಲಾತಿಯನ್ನು ರದ್ದು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಆರೋಪಿ ಪ್ರೊಫೆಸರ್ ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಆತನ ವಿರುದ್ಧದ ತನಿಖೆಯನ್ನು ವಿಶ್ವವಿದ್ಯಾಲಯದ ಆಂತರಿಕ ದೂರುಗಳ ಸಮಿತಿಗೆ ವಹಿಸಿ ವಿಶ್ವವಿದ್ಯಾಲಯದ ಕುಲಪತಿ ಮೊಹಮ್ಮದ್ ಶಕೀಲ್ ಆದೇಶಿಸಿದ್ದಾರೆ.

ADVERTISEMENT

ಈ ಪ್ರಕಾರ ತನಿಖೆ ಮುಗಿಯುವವರೆಗೆ ಅಮಾನತುಗೊಂಡಿರುವ ಪ್ರೊಫೆಸರ್ ತರಗತಿಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

ಜವಾಹರಲಾಲ್ ನೆಹರೂ ಅಧ್ಯಯನ, ಜೆಎಂಐನ ನಾಲ್ವರು ಪಿಎಚ್‌.ಡಿ ವಿದ್ಯಾರ್ಥಿನಿಯರು ಪ್ರೊಫೆಸರ್ ವಿರುದ್ಧ ಲೈಂಗಿಕ ದೌರ್ಜನ್ಯ, ಅಸಹಕಾರ, ಅಗೌರವದ ನಡವಳಿಕೆ, ಒರಟು ನಡವಳಿಕೆ ಮತ್ತು ಅನಾಗರಿಕವಾದ ಭಾಷೆ ಬಳಸುತ್ತಾರೆ ಎಂದು ದೂರು ನೀಡಿದ್ದಾರೆ ಎಂದು ಜುಲೈ 16ರಂದು ಹೊರಡಿಸಲಾದ ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.