ADVERTISEMENT

ಕಾಶ್ಮೀರ ವಿಭಜನೆ ಸಂಸತ್ತಿನ ಮನ್ನಣೆ

ಮಸೂದೆ, ನಿರ್ಣಯಕ್ಕೆ ಲೋಕಸಭೆ ಅಸ್ತು

ಪಿಟಿಐ
Published 7 ಆಗಸ್ಟ್ 2019, 5:24 IST
Last Updated 7 ಆಗಸ್ಟ್ 2019, 5:24 IST
   

ನವದೆಹಲಿ:ಜಮ್ಮು ಮತ್ತು ಕಾಶ್ಮೀರ ರಾಜ್ಯ ಇತಿಹಾಸ ಸೇರಲಿದೆ. ಈ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದು ಮಾಡುವ ನಿರ್ಣಯ (ಸಂವಿಧಾನದ 370ನೇ ವಿಧಿಯ ಅನ್ವಯ ರದ್ದು) ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮಸೂದೆಗೆ ಲೋಕಸಭೆಯು ಮಂಗಳವಾರ ಒಪ್ಪಿಗೆ ಕೊಟ್ಟಿದೆ.ರಾಜ್ಯಸಭೆ ಈ ಎರಡಕ್ಕೂ ಸೋಮವಾರ ಅನುಮೋದನೆ ಕೊಟ್ಟಿದೆ.

ಮಸೂದೆ ಮತ್ತು ನಿರ್ಣಯವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಲೋಕಸಭೆಯಲ್ಲಿ ಮಂಗಳವಾರ ಬೆಳಿಗ್ಗೆ ಮಂಡಿಸಿದರು.

ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ನಮ್ಮದು ಎಂಬ ಹಕ್ಕು ಮಂಡನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪ್ರತ್ಯೇಕ
ತಾವಾದಿ ನಾಯಕರ ಜತೆಗೆ ಮಾತುಕತೆಯೂ ಇಲ್ಲ. ಆದರೆ, ಕಾಶ್ಮೀರದ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಅಲ್ಲಿನ ಜನರ ಜತೆ ಮಾತನಾಡುತ್ತೇವೆ ಎಂದರು.

ADVERTISEMENT

ಜವಾಹರಲಾಲ್‌ ನೆಹರೂ ಅವರನ್ನು ಶಾ ತಮ್ಮ ವಾಗ್ದಾಳಿಯ ಗುರಿಯಾಗಿಸಿಕೊಂಡರು. ‘1948ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ಸೇನೆ ವಿಜಯದ ಹೊಸ್ತಿಲಲ್ಲಿದ್ದಾಗ ಏಕಪಕ್ಷೀಯವಾಗಿ ಕದನ ವಿರಾಮ ಘೋಷಣೆ ಮಾಡಿದ್ದು ಯಾರು? ಅದು ಜವಾಹರಲಾಲ್‌ ನೆಹರೂ. ಆಗ ಸೇನೆಗೆ ಮುಕ್ತ ಕಾರ್ಯಾಚರಣೆಗೆ ಅವಕಾಶ ಕೊಟ್ಟಿದ್ದಿದ್ದರೆ ಪಾಕ್‌ ಆಕ್ರಮಿತ ಕಾಶ್ಮೀರ ಆಗಲೇ ನಮ್ಮ ವಶವಾಗುತ್ತಿತ್ತು’ ಎಂದರು.

ಇಮ್ರಾನ್‌ ಎಚ್ಚರಿಕೆ

‘ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದರಿಂದ ಪುಲ್ವಾಮಾ ಮಾದರಿ ದಾಳಿ ನಡೆದು, ಭಾರತ– ಪಾಕಿ
ಸ್ತಾನದ ಮಧ್ಯೆ ಯುದ್ಧ ನಡೆಯುವ ಅಪಾವಿದೆ’ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಎಚ್ಚರಿಕೆ ನೀಡಿದ್ದಾರೆ.

**

ಜಮ್ಮು ಮತ್ತು ಕಾಶ್ಮೀರವು ಈಗ ಎಲ್ಲ ಸಂಕೋಲೆಗಳಿಂದ ಮುಕ್ತವಾಗಿದೆ. ಹೊಸ ಬೆಳಗು ಕಂಡಿದೆ.
- ನರೇಂದ್ರ ಮೋದಿ, ಪ್ರಧಾನಿ

**
ಮತವಿಭಜನೆ
351 ಪರ
72 ವಿರುದ್ಧ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.