ಬೆಂಗಳೂರು: ಜಮ್ಮು–ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಓಯೊ ಜತೆ ಸರ್ಕಾರ ಸಹಯೋಗಕ್ಕೆ ಮುಂದಾಗಿದೆ.
ಜತೆಗೆ ಕೇಂದ್ರದ ‘ಮಿಶನ್ ಯೂತ್‘ ಕಾರ್ಯಕ್ರಮದ ಮೂಲಕ ಜಮ್ಮು–ಕಾಶ್ಮೀರದ 75 ಹಳ್ಳಿಗಳಲ್ಲಿ ಹೋಮ್ ಸ್ಟೇ ಆರಂಭಿಸಿ, ಸ್ವ ಉದ್ಯೋಗ ಮತ್ತು ಉದ್ಯಮಶೀಲತೆಯನ್ನು ಬೆಳೆಸಲು ಸರ್ಕಾರ ಮತ್ತು ಓಯೊ ಕ್ರಮ ಕೈಗೊಳ್ಳಲಿದೆ.
ಜಮ್ಮು–ಕಾಶ್ಮೀರ ಲೆ. ಗವರ್ನರ್ ಮನೋಜ್ ಸಿನ್ಹಾ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಈ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ.
ಇದೇ ಸಂದರ್ಭದಲ್ಲಿ ಹೋಮ್ ಸ್ಟೇ ಆರಂಭಿಸುವ ಯುವಕರಿಗೆ ವಿಶೇಷವಾಗಿ ₹50,000 ಸಹಾಯಧನವನ್ನು ಲೆ. ಗವರ್ನರ್ ಘೋಷಿಸಿದ್ದಾರೆ.
ಜಮ್ಮು–ಕಾಶ್ಮೀರದಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೆ ಹೋಮ್ ಸ್ಟೇ ಮತ್ತು ಓಯೊ ಜತೆಗಿನ ಸಹಯೋಗ ಅನುಕೂಲವಾಗಲಿದೆ ಎಂದು ಲೆ. ಗವರ್ನರ್ ಮನೋಜ್ ಸಿನ್ಹಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.