ADVERTISEMENT

ಜಮ್ಮು ಮತ್ತು ಕಾಶ್ಮೀರ | ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಟ್ರಕ್ ವಶ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 10:31 IST
Last Updated 12 ಸೆಪ್ಟೆಂಬರ್ 2019, 10:31 IST
   

ಕಠುವಾ(ಜಮ್ಮು ಕಾಶ್ಮೀರ): ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಟ್ರಕ್‌ಹಾಗು ಮೂವರು ಶಂಕಿತ ಉಗ್ರರನ್ನು ಜಮ್ಮು–ಕಾಶ್ಮೀರ ಹಾಗೂ ಪಂಜಾಬ್‌ ಗಡಿಯಲ್ಲಿರುವ ಕಠುವಾ ಜಿಲ್ಲೆಯ ಲಖನ್‌ಪುರ್‌ ಎಂಬಲ್ಲಿ ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವಜಮ್ಮು ಪೊಲೀಸ್‌ ಮಹಾನಿರ್ದೇಶಕ ಮಕೇಶ್‌ ಸಿಂಗ್‌,‘ಪಂಜಾಬ್‌ನ ಬಮ್ಯಾಲ್‌ ಎಂಬಲ್ಲಿಂದ ಕಾಶ್ಮೀರದತ್ತ ಸಾಗುತ್ತಿದ್ದ ಟ್ರಕ್‌ ಅನ್ನು ಜಮ್ಮು–ಪಠಾಣ್‌ಕೋಟ್‌ ಹೆದ್ದಾರಿಯಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಈ ವೇಳೆಆರು ಎಕೆ–47 ರೈಫಲ್‌ಗಳು ಪತ್ತೆಯಾಗಿವೆ. ಟ್ರಕ್‌ ಹಾಗೂ ಮೂವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದಿದ್ದೇವೆ. ವಿಚಾರಣೆ ಮುಂದುವರಿದಿದೆ’ ಎಂದುತಿಳಿಸಿದ್ದಾರೆ.

ಈ ಸಂಬಂಧ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಪಾಕಿಸ್ತಾನ ವಿರುದ್ಧ ಹರಿಹಾಯ್ದಿದ್ದಾರೆ.ಅವರು,‘ಪಾಕಿಸ್ತಾನವು ಭಯೋತ್ಪಾದನೆಯ ಪಾಯೋಜಕತ್ವವನ್ನು ಮುಂದುವರಿಸಿದೆ’ ಎಂದು ಕಿಡಿಕಾರಿದ್ದಾರೆ.

ADVERTISEMENT
ಜಿತೇಂದ್ರ ಸಿಂಗ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.