ADVERTISEMENT

ಪುಲ್ವಾಮಾ ದಾಳಿ ಪಾಕಿಸ್ತಾನ ‘ಹತಾಶೆ’ಯ ಫಲಿತಾಂಶ: ಸತ್ಯಪಾಲ್‌ ಮಲಿಕ್‌ ಹೇಳಿಕೆ

ಜಮ್ಮುಕಾಶ್ಮೀರ ರಾಜ್ಯಪಾಲ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 5:13 IST
Last Updated 15 ಫೆಬ್ರುವರಿ 2019, 5:13 IST
   

ನವದೆಹಲಿ: ರಾಜ್ಯದಲ್ಲಿ ಪಂಚಾಯತ್‌ ರಾಜ್‌ ಚುನಾವಣೆಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದರಿಂದಾಗಿ ನೆರೆ ರಾಷ್ಟ್ರ ಪಾಕಿಸ್ತಾನವು ‘ತೀವ್ರ ಹತಾಶೆ’ಗೆ ಒಳಗಾಗಿದೆ ಎಂದು ಜಮ್ಮು ಕಾಶ್ಮಿರ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವಸತ್ಯಪಾಲ್‌, ‘ರಾಜ್ಯದಲ್ಲಿ ಪಂಚಾಯತ್‌ ರಾಜ್‌ ಚುನಾವಣೆಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಹೊಸದಾಗಿ ಉಗ್ರರನ್ನು ನೇಮಕಮಾಡಲು ಅವರಿಗೆ(ಪಾಕಿಸ್ತಾನಕ್ಕೆ) ಸಾಧ್ಯವಾಗಿಲ್ಲ. ಎಲ್ಲಾ ಕಡೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಕಲ್ಲು ತೂರಾಟವನ್ನೂ ನಿಯಂತ್ರಿಸಲಾಗಿದೆ. ಹೀಗಾಗಿ ಪಾಕಿಸ್ತಾನವು ಹತಾಶೆಗೊಳಗಾಗಿದೆ’ ಎಂದು ಹೇಳಿದ್ದಾರೆ.

ಆದರೆ ಈ ದಾಳಿಗೆಸಂಬಂಧಿಸಿದಂತೆ ತನ್ನ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದ ಪಾಕಿಸ್ತಾನ, ‘ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ’ ಎಂದಿತ್ತು. ಪಾಕ್‌ ಪ್ರತಿಕ್ರಿಯೆಯನ್ನು ತಳ್ಳಿಹಾಕಿರುವ ಸತ್ಯಪಾಲ್‌, ‘ಪಾಕಿಸ್ತಾನದಲ್ಲಿ ಉಗ್ರರು ಬಹಿರಂಗವಾಗಿ ರ‍್ಯಾಲಿಗಳನ್ನು ನಡೆಸುವುದನ್ನು ಹಾಗೂ ಭಾರತಕ್ಕೆ ಬೆದರಿಕೆ ಒಡ್ಡುವುದನ್ನು ನಾವು ನೋಡಿದ್ದೇವೆ’ ಎಂದು ತಿರುಗೇಟು ನೀಡಿದ್ದಾರೆ.

ADVERTISEMENT

‘ಗೃಹ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರಕ್ಷಣಾ ಲೋಪಕ್ಕೆ ಕಾರಣವನ್ನು ಕಂಡುಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.