ADVERTISEMENT

ಜಾರ್ಖಂಡ್‌: 1932ರ ಭೂ ದಾಖಲೆ ಬಳಸುವ ಪ್ರಸ್ತಾಪವಿದ್ದ ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 14:51 IST
Last Updated 11 ನವೆಂಬರ್ 2022, 14:51 IST
1932ರ ಭೂ ದಾಖಲೆಯನ್ನು ಬಳಸುವ ಮಸೂದೆಯನ್ನು ಶುಕ್ರವಾರ ಜಾರ್ಖಂಡ್‌ ವಿಧಾನಸಭೆ ಆಂಗೀಕರಿಸಿದ ಬಳಿಕ ಸಂಭ್ರಮಿಸಿದ ರಾಜ್ಯದ ಮುಖ್ಯಮಂತ್ರಿ ಹೇಮಂತ್‌ ಸೊರೆನ್ ಮತ್ತು ಯುಪಿಎ ಶಾಸಕರು   –ಪಿಟಿಐ ಚಿತ್ರ
1932ರ ಭೂ ದಾಖಲೆಯನ್ನು ಬಳಸುವ ಮಸೂದೆಯನ್ನು ಶುಕ್ರವಾರ ಜಾರ್ಖಂಡ್‌ ವಿಧಾನಸಭೆ ಆಂಗೀಕರಿಸಿದ ಬಳಿಕ ಸಂಭ್ರಮಿಸಿದ ರಾಜ್ಯದ ಮುಖ್ಯಮಂತ್ರಿ ಹೇಮಂತ್‌ ಸೊರೆನ್ ಮತ್ತು ಯುಪಿಎ ಶಾಸಕರು   –ಪಿಟಿಐ ಚಿತ್ರ   

ರಾಂಚಿ: ಜಾರ್ಖಂಡ್‌ನಲ್ಲಿ ‘ಆದಿವಾಸಿ ಸ್ಥಾನಮಾನ’ ನಿಗದಿಪಡಿಸಲು 1932ರ ಭೂ ದಾಖಲೆಗಳನ್ನು ಬಳಸುವ ಪ್ರಸ್ತಾವ ಹೊಂದಿದ್ದ ಮಸೂದೆಯನ್ನು ಜಾರ್ಖಂಡ್‌ ವಿಧಾನಸಭೆ ಶುಕ್ರವಾರ ಆಂಗೀಕರಿಸಿತು.

ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ‘ಆದಿವಾಸಿ ಪದಕ್ಕೆ ಜಾರ್ಖಂಡ್‌ ನೀಡುವ ವ್ಯಖ್ಯಾನ ಮತ್ತು ಆದಿವಾಸಿಗಳಿಗೆ ತ್ವರಿತಗತಿಯಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಇತರ ಸೌಲಭ್ಯಗಳನ್ನು ನೀಡುವ ಮಸೂದೆ– 2022’ಅನ್ನು ಧ್ವನಿ ಮತದ ಮೂಲಕ ಆಂಗೀಕರಿಸಲಾಯಿತು. ಆದಿವಾಸಿ ಜನಾಂಗದ ಜನಸಂಖ್ಯೆ ಇಳಿಕೆಯಾಗುತ್ತಿದೆ. ಇದನ್ನು ತಡೆಯಲು ನೀತಿ ರೂಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಈ ಮಸೂದೆ ಹೇಳಲಾಗಿದೆ.

ಈ 1932ರ ಭೂ ದಾಖಲೆಯು ಬ್ರಿಟಿಷರು ನಡೆಸಿದ್ದ ಕಡೆಯ ಭೂ ಸಮೀಕ್ಷೆಯ ದಾಖಲೆಯಾಗಿದೆ. ಆದಿವಾಸಿಗಳನ್ನು ಗುರುತಿಸಲು ಈಗ ಬಳಕೆಯಲ್ಲಿರುವ 1985ರ ದಾಖಲೆಗೆ ಬದಲಾಗಿ 1932ರ ದಾಖಲೆಯನ್ನೇ ಬಳಸಬೇಕು ಎಂಬುದು ಆದಿವಾಸಿ ಜನಾಂಗಗಳ ಬಹುದಿನಗಳ ಆಗ್ರಹವಾಗಿತ್ತು.

ADVERTISEMENT

‘ಈ ಮಸೂದೆ ಜಾರಿಯಾದ ದಿನವನ್ನು ರಾಜ್ಯದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗುವುದು’ ಎಂದು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಮಸೂದೆ ಆಂಗೀಕಾರವಾಗುತ್ತಿದ್ದಂತೆ ರಾಜ್ಯದಾದ್ಯಂತ ಜಾರ್ಖಂಡ್‌ ಮುಕ್ತಿ ಮೋರ್ಚಾ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.