ADVERTISEMENT

ನಾನು ದ್ರಾವಿಡ್ ಅಭಿಮಾನಿ: ಬೂಮ್ರಾ, ಕೊಹ್ಲಿ ನೆಚ್ಚಿನ ಕ್ರಿಕೆಟಿಗರು; ಚಂದ್ರಚೂಡ್

ಪಿಟಿಐ
Published 24 ನವೆಂಬರ್ 2024, 11:32 IST
Last Updated 24 ನವೆಂಬರ್ 2024, 11:32 IST
<div class="paragraphs"><p>ಡಿ.ವೈ. ಚಂದ್ರಚೂಡ್ ಮತ್ತು ಒಳಚಿತ್ರಗಳಲ್ಲಿ&nbsp;ಜಸ್​ಪ್ರೀತ್​ ಬೂಮ್ರಾ, ವಿರಾಟ್ ಕೊಹ್ಲಿ</p></div>

ಡಿ.ವೈ. ಚಂದ್ರಚೂಡ್ ಮತ್ತು ಒಳಚಿತ್ರಗಳಲ್ಲಿ ಜಸ್​ಪ್ರೀತ್​ ಬೂಮ್ರಾ, ವಿರಾಟ್ ಕೊಹ್ಲಿ

   

Credit: PTI Photos

ನವದೆಹಲಿ: ‘ನನಗೆ ಇಷ್ಟವಾಗುವ ಆಟ ಕ್ರಿಕೆಟ್. ನಾನು ರಾಹುಲ್ ದ್ರಾವಿಡ್ ಅವರ ಅಭಿಮಾನಿಯಾಗಿದ್ದು, ಪ್ರಸ್ತುತ ಆಟಗಾರರಲ್ಲಿ ಜಸ್​ಪ್ರೀತ್​ ಬೂಮ್ರಾ, ವಿರಾಟ್ ಕೊಹ್ಲಿ ಅವರೆಂದರೆ ನನಗೆ‌ ಅಚ್ಚುಮೆಚ್ಚು’ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ತಿಳಿಸಿದ್ದಾರೆ.

ADVERTISEMENT

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ‘ನಾನು ಕೆಲಸದ ವೇಳಾಪಟ್ಟಿಗೆ ಅನುಗುಣವಾಗಿ ಸಮಯ ಸಿಕ್ಕಾಗ ಸಾಧ್ಯವಾದಷ್ಟು ಕ್ರಿಕೆಟ್‌ ನೋಡಲು ಬಯಸುತ್ತೇನೆ. ಅದರಲ್ಲೂ ವಿಶೇಷವಾಗಿ ಭಾರತ ತಂಡದ ಆಟವನ್ನು ನೋಡಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದ್ದಾರೆ.

‘ನನ್ನ ನೆಚ್ಚಿನ ಆಟ ಕ್ರಿಕೆಟ್. ಆದರೆ, ನನಗೆ ಕ್ರಿಕೆಟ್ ಆಡಲು ಸಮಯ ಸಿಗುತ್ತಿಲ್ಲ. ಅಲ್ಲದೆ, ನನಗೂ ಸ್ವಲ್ಪ ವಯಸ್ಸಾಗಿದೆ. ಮೊಬೈಲ್‌ನಲ್ಲಿ ಪಂದ್ಯದ ಲೈವ್‌ ವೀಕ್ಷಿಸಲು ಇದುವರೆಗೆ ಸಾಧ್ಯವಾಗಿಲ್ಲ. ಆದರೆ, ಐದರಿಂದ ಏಳು ನಿಮಿಷಗಳ ಹೈಲೈಟ್ಸ್‌ ವಿಡಿಯೊಗಳನ್ನು ವೀಕ್ಷಿಸುತ್ತೇನೆ’ ಎಂದಿದ್ದಾರೆ.

‘ಭಾರತ ತಂಡದ ಪಂದ್ಯವಿರುವಾಗ ವಿರಾಟ್ ಕೊಹ್ಲಿ ಹೇಗೆ ಆಡಿದ್ದಾರೆ. ರವಿಚಂದ್ರನ್ ಅಶ್ವಿನ್ ಹೇಗೆ ಬೌಲಿಂಗ್ ಮಾಡಿದ್ದಾರೆ ಅಥವಾ ಬೂಮ್ರಾ ಅವರು ಚೆನ್ನಾಗಿ ಬೌಲ್ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ತಪ್ಪದೇ ನೋಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ನವೆಂಬರ್ 10ರಂದು ಡಿ.ವೈ. ಚಂದ್ರಚೂಡ್ ಅವರು ಸಿಜೆಐ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಬಳಿಕ ಸುಪ್ರೀಂ ಕೋರ್ಟ್‌ನ 51ನೆಯ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಸಂಜೀವ್ ಖನ್ನಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಖನ್ನಾ ಅವರು 2025ರ ಮೇ 13ರವರೆಗೆ ಸಿಜೆಐ ಆಗಿರಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.