ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ. ಜಯಲಲಿತಾ ಅವರ ಪೋಯಸ್ ಗಾರ್ಡನ್‌ನಲ್ಲಿರುವನಿವಾಸದ ಬೀಗದ ಕೀಯನ್ನು ಅವರ ಸೋದರ ಸೊಸೆ ಜೆ.ದೀಪಾ ಅವರಿಗೆ ಶುಕ್ರವಾರ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ದೀಪಾ ಅವರು ಈ ನಿವಾಸಕ್ಕಾಗಿ ದೀರ್ಘ ಕಾಲದಿಂದ ಕಾನೂನು ಹೋರಾಟ ನಡೆಸಿದ್ದರು. ಚೆನ್ನೈ ಜಿಲ್ಲಾಧಿಕಾರಿ ಜೆ. ವಿಜಯ ರಾಣಿ ಅವರು ಬೀಗದ ಕೀಯನ್ನು ಹಸ್ತಾಂತರಿಸಿದರು.
ಜಯಲಲಿತಾ ಅವರಪೋಯಸ್ ಗಾರ್ಡನ್‌ನಲ್ಲಿರುವ ‘ವೇದ ನಿಲಯಂ’ ಅನ್ನು ಸ್ಮಾರಕವನ್ನಾಗಿ ಪರಿವರ್ತಿಸಿದ್ದ ಹಿಂದಿನ ಎಐಎಡಿಎಂಕೆ ಸರ್ಕಾರದ ಆದೇಶವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್, ಆಸ್ತಿಯನ್ನು ಸಂಬಂಧಿಸಿದ ವಾರಸುದಾರರಿಗೆ ನೀಡುವಂತೆ ನವೆಂಬರ್ 24ರಂದು ಸೂಚನೆ ನೀಡಿತ್ತು.
‘ಅತ್ತೆ ನಿಧನರಾದ ಬಳಿಕ ಅವರ ಮನೆಗೆ ಮೊದಲ ಬಾರಿ ಕಾಲಿಡುತ್ತಿದ್ದೇನೆ. ನಾನು ತುಂಬಾ ಬಾವುಕಳಾಗಿದ್ದೇನೆ’ಎಂದು ದೀಪಾ ಅವರು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.