ADVERTISEMENT

ಕೋಟಾ: ಮತ್ತೊಬ್ಬ ವೃತ್ತಿಶಿಕ್ಷಣ ಕೋರ್ಸ್ ಆಕಾಂಕ್ಷಿ ಆತ್ಮಹತ್ಯೆ

ಪಿಟಿಐ
Published 4 ಜುಲೈ 2024, 15:11 IST
Last Updated 4 ಜುಲೈ 2024, 15:11 IST
<div class="paragraphs"><p> ಆತ್ಮಹತ್ಯೆ</p></div>

ಆತ್ಮಹತ್ಯೆ

   

ಕೋಟಾ: ಎಂಜಿನಿಯರಿಂಗ್ ಕೋರ್ಸ್‌ನ ಆಕಾಂಕ್ಷಿ, 16 ವರ್ಷ ವಯಸ್ಸಿನ ವಿದ್ಯಾರ್ಥಿಯೊಬ್ಬ ತಾನು ನೆಲೆಸಿದ್ದ ಪೇಯಿಂಗ್‌ ಗೆಸ್ಟ್‌ನ ಕೊಠಡಿಯಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಜೆಇಇ ಪರೀಕ್ಷೆಗಾಗಿ ಕೋಚಿಂಗ್ ಪಡೆಯುತ್ತಿದ್ದ. 

ಕೋಟಾದಲ್ಲಿ ಈ ವರ್ಷದ ಜನವರಿಯಿಂದ ಕೋಚಿಂಗ್‌ ವಿದ್ಯಾರ್ಥಿಗಳ ಆತ್ಮಹತ್ಯೆ 13ನೇ ಪ್ರಕರಣವಿದು. 2003ರಿಂದ ಈವರೆಗೆ 26 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಂತಾಗಿದೆ.

ADVERTISEMENT

ಮೃತನನ್ನು ಬಿಹಾರದ ನಳಂದ ಜಿಲ್ಲೆಯ ಸಂದೀಪ್‌ ಕುಮಾರ್ ಕುರ್ಮಿ ಎಂದು ಗುರುತಿಸಲಾಗಿದೆ. ಈತ ಎರಡು ವರ್ಷದಿಂದ ಪಿ.ಜಿ ಕೊಠಡಿಯಲ್ಲಿ ನೆಲೆಸಿದ್ದ. ಗುರುವಾರ ಬೆಳಿಗ್ಗೆ 7 ಗಂಟೆಗೆ ಈತನ ಭೇಟಿಗೆ ಹೋಗಿದ್ದ ಸಹಪಾಠಿ ಕಿಟಕಿಯಿಂದ ಇಣುಕಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಸಹಪಾಠಿ ಪಿ.ಜಿ ನಿರ್ವಾಹಕರಿಗೆ ತಿಳಿಸಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುರ್ಮಿಯ ಸಹೋದರ ಸಂಜೀತ್ ಕೂಡಾ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ‘ನೀಟ್‌’ಗೆ ಸಿದ್ಧತೆ ನಡೆಸುತ್ತಿದ್ದು, ಪ್ರತ್ಯೇಕ ಪಿ.ಜಿಯಲ್ಲಿ ನೆಲೆಸಿದ್ದ. ಸಹೋದರರು ಎರಡು ವರ್ಷದ ಹಿಂದೆ ತಂದೆ–ತಾಯಿಯನ್ನು ಕಳೆದುಕೊಂಡಿದ್ದರು. ಮಾವನೇ ಇವರ ಶಿಕ್ಷಣದ ವೆಚ್ಚ ಭರಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.