ನವದೆಹಲಿ: ಜೆಇಇ ಮೇನ್ ಫಲಿತಾಂಶ ಪ್ರಕಟವಾಗಿದ್ದು, 56 ಅಭ್ಯರ್ಥಿಗಳು ಪರಿಪೂರ್ಣ 100 ಅಂಕ ಗಳಿಸಿದ್ದಾರೆ. ಈ ಸಾಧನೆ ಮಾಡಿದವರ ಪೈಕಿ ಹೆಚ್ಚಿನ ಅಭ್ಯರ್ಥಿಗಳು ತೆಲಂಗಾಣದವರು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ತಿಳಿಸಿದೆ.
ಪರೀಕ್ಷಾ ಅಕ್ರಮದಲ್ಲಿ ತೊಡಗಿದ್ದಕ್ಕಾಗಿ 39 ಅಭ್ಯರ್ಥಿಗಳು ಮುಂದಿನ ಮೂರು ವರ್ಷ ಕಾಲ ಜೆಇಇ–ಮೇನ್ ಪರೀಕ್ಷೆ ತೆಗೆದುಕೊಳ್ಳದಂತೆ ನಿಷೇಧ ಹೇರಲಾಗಿದೆ ಎಂದು ತಿಳಿಸಿದೆ.
ಪರಿಪೂರ್ಣ ‘100 ಅಂಕ’ ಗಳಿಸಿದವರಲ್ಲಿ 15 ಜನರು ತೆಲಂಗಾಣದವರಿದ್ದರೆ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ತಲಾ 7 ಹಾಗೂ ದೆಹಲಿಯ 6 ಅಭ್ಯರ್ಥಿಗಳು ಇದ್ದಾರೆ.
ಜೆಇಇ–ಮೇನ್ ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ನಡೆಸಲಾಗಿತ್ತು. ವಿದೇಶಗಳಲ್ಲಿ ಸಹ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು 10 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.