ADVERTISEMENT

ಕ್ಯಾಮರಾನ್‌ನಲ್ಲಿ ಸಿಲುಕಿದ್ದ 27 ಭಾರತೀಯ ಕಾರ್ಮಿಕರ ರಕ್ಷಣೆ

ಪಿಟಿಐ
Published 24 ಜುಲೈ 2024, 11:04 IST
Last Updated 24 ಜುಲೈ 2024, 11:04 IST
<div class="paragraphs"><p>ಕಾರ್ಮಿಕರ ರಕ್ಷಣೆ</p></div>

ಕಾರ್ಮಿಕರ ರಕ್ಷಣೆ

   

(ಚಿತ್ರ ಕೃಪೆ: X/@HemantSorenJMM)

ರಾಂಚಿ: ಮಧ್ಯ ಆಫ್ರಿಕಾದ ಕ್ಯಾಮರಾನ್ ದೇಶದಲ್ಲಿ ಸಿಲುಕಿದ್ದ ಜಾರ್ಖಂಡ್‌ ಮೂಲದ 27 ಕಾರ್ಮಿಕರನ್ನು ಬುಧವಾರ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಕಾಮರಾನ್‌ನಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರು ಇತ್ತೀಚೆಗೆ ವಿಡಿಯೊ ಸಂದೇಶದ ಮೂಲಕ ರಾಜ್ಯ ಸರ್ಕಾರದ ಸಹಾಯ ಕೋರಿದ್ದರು. ಕಂಪನಿಯಿಂದ ಸಂಬಳ ದೊರಕುತ್ತಿಲ್ಲ. ದಿನನಿತ್ಯದ ಊಟಕ್ಕೂ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದರು.

ಇದರ ಬೆನ್ನಲ್ಲೇ ಕಾರ್ಮಿಕರ ರಕ್ಷಣೆಗಾಗಿ ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದ್ದರು.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಸೊರೇನ್, ಆಫ್ರಿಕಾದ ಕ್ಯಾಮರಾನ್‌ನಲ್ಲಿ ಸಿಲುಕಿದ್ದ ರಾಜ್ಯದ 27 ಕಾರ್ಮಿಕರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಅವರಿಗೆ ಸುಮಾರು ₹30 ಲಕ್ಷ ಪಾವತಿ ಮಾಡಲಾಗಿದೆ. ಹೆಚ್ಚುವರಿಯಾಗಿ ತಲಾ ₹25 ಸಾವಿರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಮಾರ್ಚ್ 29ರಂದು ಕ್ಯಾಮರಾನ್‌ಗೆ ತೆರಳಿದ್ದ ಕಾರ್ಮಿಕರು ಗುತ್ತಿಗೆದಾರನ ಅಡಿಯಲ್ಲಿ ನಾಲ್ಕು ತಿಂಗಳು ಕೆಲಸ ಮಾಡಿದ್ದರು. ಆದರೆ ಸಂಬಳ ಸಿಗಲಿಲ್ಲ. ಒಂದು ಹೊತ್ತಿನ ಊಟಕ್ಕೂ ತೊಂದರೆ ಎದುರಾಗಿತ್ತು ಎಂದು ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.