ರಾಂಚಿ: ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವು (ಜೆಎಂಎಂ) ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ.
ಹಾಲಿ ಶಾಸಕರಾದ ಚಮ್ರಾ ಲಿಂಡಾ ಬಿಶುನ್‌ಪುರದಿಂದ ಸ್ಪರ್ಧಿಸಿದರೆ, ಸುಖರಾಮ್ ಓರಾನ್ ಅವರು ಚಕ್ರಧರಪುರ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಉಳಿದಂತೆ ಗೋಮಿಯಾದಿಂದ ಯೋಗೇಂದ್ರ ಪ್ರಸಾದ್, ಖುಂಟಿನಿಂದ ಸ್ನೇಹಲತಾ ಕಂದುಲ್ನಾ ಮತ್ತು ಸಿಸೈಯಿಂದ ಜಿಗಾ ಸುಸರನ್ ಹೋರೊ ಅವರನ್ನು ಪಕ್ಷ ಕಣಕ್ಕಿಳಿಸಿದೆ.
35 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಜೆಎಂಎಂ ಬುಧವಾರ ಮಾಡಿದೆ. ಹಾಲಿ ಸಿಎಂ ಹೇಮಂತ್ ಸೊರೇನ್ ಬರ್ಹೈತ್‌ನಿಂದ ಹಾಗೂ ಸೊರೇನ್ ಪತ್ನಿ ಗಾಂಡೇಯ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.
ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ.
ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಜೆಎಂಎಂ 81 ಕ್ಷೇತ್ರಗಳ ಪೈಕಿ 70 ಕ್ಷೇತ್ರಗಳಲ್ಲಿ ಮೈತ್ರಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.