ADVERTISEMENT

ಜಾರ್ಖಂಡ್‌ : ಮೀಸಲಾತಿ ಪ್ರಮಾಣ ಶೇ 77ಕ್ಕೆ ಹೆಚ್ಚಿಸುವ ಮಸೂದೆ ಅಂಗೀಕಾರ

ಪಿಟಿಐ
Published 11 ನವೆಂಬರ್ 2022, 10:36 IST
Last Updated 11 ನವೆಂಬರ್ 2022, 10:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಂಚಿ: ವಿವಿಧ ವರ್ಗಗಳಿಗೆ ನೀಡಿರುವ ಮೀಸಲಾತಿಯ ಪ್ರಮಾಣವನ್ನು ಒಟ್ಟು ಶೇ 77ಕ್ಕೆ ಹೆಚ್ಚಿಸುವ ಮಸೂದೆಯನ್ನು ಜಾರ್ಖಂಡ್‌ ವಿಧಾನಸಭೆ ಶುಕ್ರವಾರ ಅಂಗೀಕರಿಸಿತು.

ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ‘ಜಾರ್ಖಂಡ್ ರಾಜ್ಯದ ಹುದ್ದೆಗಳು ಹಾಗೂ ಸೇವೆಗಳಲ್ಲಿ ಮೀಸಲಾತಿ ಕಾಯ್ದೆ, 2001’ಕ್ಕೆ ತಿದ್ದುಪಡಿ ತರುವ ಮೂಲಕ ಮಸೂದೆಗೆ ಒಪ್ಪಿಗೆ ನೀಡಲಾಯಿತು.

ಇದರೊಂದಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ತೀರ ಹಿಂದುಳಿದ ವರ್ಗಗಳು (ಇಬಿಸಿ), ಇತರ ಹಿಂದುಳಿದ ವರ್ಗಗಳು (ಒಬಿಸಿ) ಹಾಗೂ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (ಇಡಬ್ಲ್ಯುಎಸ್‌) ಸರ್ಕಾರಿ ಉದ್ಯೋಗದಲ್ಲಿನ ಮೀಸಲಾತಿ ಪ್ರಮಾಣ ಹೆಚ್ಚಳವಾಗಲಿದೆ. ರಾಜ್ಯದಲ್ಲಿ ಪ್ರಸ್ತುತ ಮೀಸಲಾತಿ ಪ್ರಮಾಣ ಶೇ 60ರಷ್ಟಿದೆ.

ADVERTISEMENT

ಈ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಅಂಗೀಕರಿಸುವ ಮೂಲಕ, ರಾಜ್ಯ ಸರ್ಕಾರ ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಬದಲಾವಣೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಿದೆ.

ಉದ್ದೇಶಿತ ಮೀಸಲಾತಿಯಿಂದಾಗಿ ಎಸ್‌ಸಿಗಳಿಗೆ ಶೇ 12ರಷ್ಟು ಕೋಟಾ ಸಿಗಲಿದ್ದರೆ, ಎಸ್‌ಟಿ– ಶೇ 28, ಇಬಿಸಿ– ಶೇ 15, ಒಬಿಸಿ– ಶೇ 12 ಹಾಗೂ ಇಡಬ್ಲ್ಯುಎಸ್‌ಗಳಿಗೆ ಶೇ 10ರಷ್ಟು ಕೋಟಾ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.