ADVERTISEMENT

Jharkhand Elections 2024: ಮೊದಲ ಹಂತ ಮುಕ್ತಾಯ; ಶೇ 66.8ರಷ್ಟು ಮತದಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ನವೆಂಬರ್ 2024, 14:37 IST
Last Updated 13 ನವೆಂಬರ್ 2024, 14:37 IST
<div class="paragraphs"><p>ಮತ ಚಲಾಯಿಸಲು ಪತ್ನಿ ಸಾಕ್ಷಿ ಜೊತೆ ಬಂದ ಮಹೇಂದ್ರ ಸಿಂಗ್‌ ಧೋನಿ</p></div>

ಮತ ಚಲಾಯಿಸಲು ಪತ್ನಿ ಸಾಕ್ಷಿ ಜೊತೆ ಬಂದ ಮಹೇಂದ್ರ ಸಿಂಗ್‌ ಧೋನಿ

   

ಚಿತ್ರ: X/ @ceojharkhand

ರಾಂಚಿ/ಪಟ್ನಾ: ಜಾರ್ಖಂಡ್‌ ವಿಧಾನಸಭೆ 43 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನವು ಬುಧವಾರ ನಡೆದಿದ್ದು ಪ್ರಾಥಮಿಕ ಮಾಹಿತಿ ಪ್ರಕಾರ ಶೇ 66.8ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ADVERTISEMENT

ಭಾರತ ಕ್ರಿಕೆಟ್‌ ತಂಡ ಮಾಜಿ ನಾಯಕ ಎಂ.ಎಸ್‌. ಧೋನಿ, ಅವರ ಪತ್ನಿ ಸಾಕ್ಷಿ, ಮುಖ್ಯಮಂತ್ರಿ ಹೇಮಂತ್‌, ಪತ್ನಿ ಕಲ್ಪನಾ ಸೋರೆನ್‌ ಸೇರಿದಂತೆ ಹಲವು ಗಣ್ಯರು ಮೊದಲ ಹಂತದ ಮತದಾನದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಧೋನಿ ಅವರೊಂದಿಗೆ ಫೋಟೊ ತೆಗೆಸಿಕೊಳ್ಳಲು ರಾಂಚಿಯ ಮತಗಟ್ಟೆಯಲ್ಲಿ ನೂಕು ನುಗ್ಗಲು ಏರ್ಪಟ್ಟಿತ್ತು.

ಜೆಎಂಎಂ ತೊರೆದು ಬಿಜೆಪಿ ಪಾಳೆಯ ಸೇರಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಚಂಪೈ ಸೋರೆನ್‌, ಆರೋಗ್ಯ ಸಚಿವ ಬನ್ನಾ ಗುಪ್ತಾ, ಜೆಎಂಎಂನ ರಾಜ್ಯಸಭಾ ಸದಸ್ಯೆ ಮಹುವಾ ಮಾಂಝಿ, ಪ್ರತಿಮಾ ದಾಸ್‌ (ಮಾಜಿ ಮುಖ್ಯಮಂತ್ರಿ ರಘುವರ್ ದಾಸ್ (ಈಗ ಒಡಿಶಾ ರಾಜ್ಯಪಾಲ) ಅವರ ಸೊಸೆ) ಸೇರಿದಂತೆ ಹಲವರ ಫಲಿತಾಂಶವು ಮತಗಟ್ಟೆಯಲ್ಲಿ ಭದ್ರಗೊಂಡಿದೆ.

ಉಳಿದ 38 ಕ್ಷೇತ್ರಗಳಿಗೆ ನ.20ರಂದು ಮತದಾನ ನಡೆಯಲಿದೆ.

75 ವರ್ಷಗಳಲ್ಲಿ ಮೊದಲ ಬಾರಿಗೆ ಮತದಾನ

ರಾಂಚಿ ಸಮೀಪದ ತಮಢ್‌ ವಿಧಾನಸಭಾ ಕ್ಷೇತ್ರದ ‌ವ್ಯಾಪ್ತಿಯಲ್ಲಿ ಬರುವ ನಕ್ಸಲ್‌ ಪೀಡಿತ ಅರಾಹಂಗಾ ಗ್ರಾಮದ ಜನರು ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸಿದರು. ನಕ್ಸಲರ ಭಯದಿಂದಾಗಿ ಈ ಗ್ರಾಮದವರು ಮತದಾನದ ತಮ್ಮ ಹಕ್ಕನ್ನು ಇಷ್ಟು ವರ್ಷಗಳವರೆಗೆ ಚಲಾಯಿಸಿಯೇ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.