ರಾಂಚಿ: ಮಹಿಳೆಯರಿಗೆ ವಾರ್ಷಿಕವಾಗಿ ನೀಡಲಾಗುತ್ತಿರುವ ₹12,000 ಹಣಕಾಸು ನೆರವನ್ನು ₹30,000ಕ್ಕೆ ಹೆಚ್ಚಿಸುವುದಕ್ಕೆ ಜಾರ್ಖಂಡ್‌ನ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಮುಖ್ಯಮಂತ್ರಿ ಮೈಯಾನ್ ಸಮ್ಮಾನ್ ಯೋಜನೆಯಡಿ(ಜೆಎಂಎಂಎಸ್‌ವೈ) ಜಾರ್ಖಂಡ್ ಸರ್ಕಾರವು ಮಹಿಳೆಯರಿಗೆ ಸದ್ಯ ಪ್ರತಿ ತಿಂಗಳು ₹1,000 ಸಹಾಯಧನ ನೀಡುತ್ತಿದೆ.
ಮುಖ್ಯಮಂತ್ರಿ ಮೈಯಾನ್ ಸಮ್ಮಾನ್ ಯೋಜನೆಯಡಿ(ಜೆಎಂಎಂಎಸ್‌ವೈ) ಫಲಾನುಭವಿಗಳಿಗೆ ಪ್ರತಿ ತಿಂಗಳು ನೀಡಲಾಗುತ್ತಿರುವ ಹಣಕಾಸು ನೆರವನ್ನು ₹1,000 ದಿಂದ ₹2,500ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಯೋಜನೆಯ 50 ಲಕ್ಷ ಫಲಾನುಭವಿಗಳಿಗೆ ಡಿಸೆಂಬರ್‌ನಂದ ಈ ಪರಿಷ್ಕೃತ ಸಹಾಯಧನ ಸಿಗಲಿದೆ. ಇದರಿಂದ ಸರ್ಕಾರಕ್ಕೆ ಹೆಚ್ಚುವರಿ ₹9,000 ಕೋಟಿ ಹೊರೆಯಾಗಲಿದೆ ಎಂದು ಸಂಪುಟ ಕಾರ್ಯದರ್ಶಿ ವಂದನಾ ದಡೇಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.