ನವದೆಹಲಿ: ಜಾರ್ಖಂಡ್ ಬಿಜೆಪಿ ಘಟಕವು ಬಳಸುತ್ತಿರುವ ಫೇಸ್‌ಬುಕ್ ಮತ್ತು ‘ಎಕ್ಸ್’ ಜಾಲತಾಣದ ಖಾತೆಗಳನ್ನು ನಿರ್ಬಂಧಿಸುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಭಾನುವಾರ ದೂರು ಸಲ್ಲಿಸಿದೆ.
ಸಾಮಾಜಿಕ ಜಾಲತಾಣದ ತನ್ನ ಖಾತೆಗಳಲ್ಲಿ ಬಿಜೆಪಿಯು ಪೋಸ್ಟ್ ಮಾಡಿರುವ ‘ಕೋಮು, ವಿಭಜನೆ ಹಾಗೂ ದ್ವೇಷಪೂರಿತ’ ಹೇಳಿಕೆಗಳು ಹಾಗೂ ವಿಡಿಯೊಗಳನ್ನು ತೆಗೆದುಹಾಕುವಂತೆ ಆದೇಶವನ್ನು ಜಾರಿಗೊಳಿಸಿ ಎಂದು ಇದೇ ಸಂದರ್ಭ ಆಗ್ರಹಿಸಿದೆ.
ಕಾಂಗ್ರೆಸ್ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದ ವಿಡಿಯೊವನ್ನು ತನ್ನ ಸಾಮಾಜಿಕ ಜಾಲತಾಣದ ಖಾತೆಗಳಿಂದ ತೆಗೆದುಹಾಕದ ಬಿಜೆಪಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಒತ್ತಾಯಿಸಿದ್ದಾರೆ.
ಬಿಜೆಪಿ ವಿರುದ್ಧ ಜೈರಾಮ್ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆಯೋಗಕ್ಕೆ ಎರಡನೇ ಬಾರಿಗೆ ದೂರು ದಾಖಲಿಸಿದ್ದಾರೆ.
ಚುನಾವಣಾ ಆಯೋಗದ ಆದೇಶದ ಮೇರೆಗೆ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.