ADVERTISEMENT

Jharkhand Election: ಬುಡಕಟ್ಟು ನಾಯಕ ಮಂಡಲ್ ಮುರ್ಮು ಬಿಜೆಪಿ ಸೇರ್ಪಡೆ

ಪಿಟಿಐ
Published 7 ನವೆಂಬರ್ 2024, 11:19 IST
Last Updated 7 ನವೆಂಬರ್ 2024, 11:19 IST
ಬಿಜೆಪಿ ಚಿಹ್ನೆ
ಬಿಜೆಪಿ ಚಿಹ್ನೆ   

ರಾಂಚಿ: ಸಂತಾಲ್ ಪ್ರಾಂತ್ಯದ ಬುಡಕಟ್ಟು ಸಮುದಾಯದ ನಾಯಕ ಮಂಡಲ್ ಮುರ್ಮು ಬಿಜೆಪಿ ಸೇರ್ಪಡೆಗೊಂಡಿದ್ದಾರೆ ಎಂದು ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಚಂಪಾಯಿ ಸೋರೆನ್ ಗುರುವಾರ ಹೇಳಿದ್ದಾರೆ.

ಸೆರೈಕೆಲಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸೋರೆನ್ ಅವರು ಮಾಧ್ಯಮಗಳಿಗೆ ಈ ಮಾಹಿತಿ ನೀಡಿದರು.

ಬಾಂಗ್ಲಾದೇಶದಿಂದ ನುಸುಳುವವರು ಸ್ಥಳೀಯ ಬುಡಕಟ್ಟು ಜನರಿಗೆ ತೊಂದರೆ ನೀಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.

ADVERTISEMENT

ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ನಾಮಪತ್ರಕ್ಕೆ ಮಂಡಲ್ ಮುರ್ಮು ಪ್ರಸ್ತಾವಕರಾಗಿ ಸಹಿ ಮಾಡಿದ್ದರು.

ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಗಮನ ನೀಡುತ್ತಿಲ್ಲ, ಬಾಂಗ್ಲಾದೇಶದಿಂದ ನುಸುಳಿದವರು ರಾಜಕೀಯ ಪ್ರಭಾವ ಬಳಸಿ  ಬುಡಕಟ್ಟು ಭೂಮಿಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಹಾಗೇ ಸಮುದಾಯದ ಸಾಮಾಜಿಕ ಸ್ಥಿತಿಗತಿಗಳ ಅಸ್ತವ್ಯಸ್ತಗೊಂಡಿವೆ ಎಂದು ಅವರು ಆರೋಪ ಮಾಡಿದರು.

ಈ ಹಿನ್ನೆಲೆಯಲ್ಲಿ ಮಂಡಲ್ ಮುರ್ಮು ಬಿಜೆಪಿ ಸೇರಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.