ADVERTISEMENT

ಜಾರ್ಖಂಡ್ | ವಿಧವಾ ಪುನರ್ವಿವಾಹ ಯೋಜನೆ ಜಾರಿಗೆ ರಾಜ್ಯಸರ್ಕಾರದ ಸಿದ್ಧತೆ

ಪಿಟಿಐ
Published 5 ಮಾರ್ಚ್ 2024, 13:48 IST
Last Updated 5 ಮಾರ್ಚ್ 2024, 13:48 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಂಚಿ: ವಿಧವೆಯರ ಜೀವನ ಗುಣಮಟ್ಟ ಹೆಚ್ಚಳ ಮತ್ತು ಘನತೆಯ ಬದುಕು ನಡೆಸಲು ಅನುಕೂಲವಾಗುವಂತೆ ಮರು ವಿವಾಹವನ್ನು ಉತ್ತೇಜಿಸುವ ಯೋಜನೆಗೆ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್ ನೇತೃತ್ವದ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ.

‘ಬುಧವಾರದಿಂದ ಜಾರಿಗೆ ಬರಲಿರುವ ಈ ಯೋಜನೆ ಮೂಲಕ ವಿಧವೆಯರ ಮರು ವಿವಾಹಕ್ಕೆ ರಾಜ್ಯ ಸರ್ಕಾರದಿಂದ ತಲಾ ₹2 ಲಕ್ಷ ಪ್ರೋತ್ಸಾಹ ಮೊತ್ತ ನೀಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ತಿಳಿಸಿದ್ದಾರೆ.

ADVERTISEMENT

‘ನಮ್ಮ ಸಮಾಜದಲ್ಲಿ ವಿಧವೆಯರಿಗೆ ಘನತೆಯ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ. ಇದು ಅವರ ಜೀವನದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ. ದೇಶಕ್ಕೆ ಮತ್ತು ಸಮಾಜಕ್ಕೆ ಅವರಿಂದ ಸಿಗಬೇಕಾದ ಕೊಡುಗೆ ಸಿಗುತ್ತಿಲ್ಲ. ದೇಶ ನಿರ್ಮಾಣ ಹಾಗೂ ಸಮಾಜ ಪುನಾರಚನೆಗಾಗಿ ವಿಧವೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಅಗತ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

2024–25ನೇ ಸಾಲಿಗೆ ₹1.28 ಲಕ್ಷ ಕೋಟಿಯಷ್ಟು ಬಜೆಟ್‌ ಅನ್ನು ಇತ್ತೀಚೆಗೆ ಮಂಡಿಸಿದ ಚಂಪೈ ಸೊರೇನ್ ಅವರು, ಕಳೆದ ಸಾಲಿಗಿಂತ ಶೇ 10ರಷ್ಟು ಬಜೆಟ್ ಗಾತ್ರವನ್ನು ಹೆಚ್ಚಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.