ರಾಂಚಿ: ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಮುಂದಾದ 30 ಬಂಡಾಯ ನಾಯಕರನ್ನು ಬಿಜೆಪಿಯು ಪಕ್ಷದಿಂದ ಉಚ್ಛಾಟಿಸಿದೆ.
‘ಪಕ್ಷದ ನೀತಿಗಳನ್ನು ಧಿಕ್ಕರಿಸಿ ಅಧಿಕೃತ ಅಭ್ಯರ್ಥಿಗಳ ವಿರುದ್ಧವೇ ನಾಮಪತ್ರ ಸಲ್ಲಿಸಿ ಸ್ಪರ್ಧಿಸಲು ಮುಂದಾಗಿದ್ದಕ್ಕಾಗಿ 30 ನಾಯಕರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ’ ಎಂದು ಬಿಜೆಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಉಚ್ಛಾಟಿತರಲ್ಲಿ ಪಲಮು ಕ್ಷೇತ್ರದ ಚಂದ್ರಮಾ ಕುಮಾರಿ, ಹಜಾರಿಬಾಗ್‌ನ್ ಕುಂಕುಮ್ ದೇವಿ, ದುಮ್ಕಾದ ಜೂಲಿ ದೇವಿ, ಲತೇಹರ್‌ನ ಬಲ್ವಂತ್ ಸಿಂಗ್, ಖರ್ಸ್ವಾನ್‌ನ ಅರವಿಂದ್ ಸಿಂಗ್, ಹಜಾರಿಬಾಗ್‌ನ ಬಂಕೆ ಬಿಹಾರಿ, ಬೊಕಾರೊದ ಚಿತ್ರಂಜನ್ ಸಾವೊ ಸೇರಿದ್ದಾರೆ.
81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 13 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ನ.23ಕ್ಕೆ ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.