ನವದೆಹಲಿ: ಜಮ್ಮು–ಕಾಶ್ಮೀರದಲ್ಲಿ ಹರಿಯಾಣಕ್ಕಿಂತ ಹೆಚ್ಚು ಮತದಾರರು ‘ನೋಟಾ’ ಚಲಾವಣೆ ಮಾಡಿದ್ದಾರೆ. ಚುನಾವಣಾ ಆಯೋಗದ ದತ್ತಾಂಶದಿಂದ ಇದು ದೃಢಪಟ್ಟಿದೆ.
90 ಸದಸ್ಯರ ಹರಿಯಾಣ ವಿಧಾನಸಭೆಗೆ ರಾಜ್ಯದ ಎರಡು ಕೋಟಿ ಮತದಾರರ ಪೈಕಿ ಶೇ 67.90ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅದರ ಪೈಕಿ ಶೇ 0.38ರಷ್ಟು ಮಂದಿ ಮತಯಂತ್ರದಲ್ಲಿನ ‘ನೋಟಾ’ ಬಟನ್ ಒತ್ತಿದ್ದಾರೆ.
ಜಮ್ಮು–ಕಾಶ್ಮೀರದ 90 ಸ್ಥಾನಗಳಿಗಾಗಿ ಮೂರು ಹಂತದಲ್ಲಿ ನಡೆದ ಮತದಾನದಲ್ಲಿ ಶೇ 63.88 ಮತದಾರರು ಮತ ಚಲಾಯಿಸಿದ್ದಾರೆ. ಅವರ ಪೈಕಿ ಶೇ 1.48 ಮಂದಿ ‘ನೋಟಾ’ ಒತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.