ನವದೆಹಲಿ: ‘ಜಮ್ಮು ಮತ್ತು ಕಾಶ್ಮೀರ ಪುನಾರಚನೆ ಮಸೂದೆ–2019’ ಇಂದು ರಾಜ್ಯಸಭೆಯಲ್ಲಿ ಅಂಗೀಕಾರವಾಯಿತು.
ಸಂವಿಧಾನದ ವಿಧಿ 370ರ ಸಂಬಂಧದ ಪ್ರಸ್ತಾವಕ್ಕೆ ರಾಜ್ಯಸಭೆ ಅನುಮೋದನೆ ನೀಡಿತು. ವಿಧೇಯಕದ ಪರವಾಗಿ 125 ಮತಗಳು ಮತ್ತು ವಿರೋಧವಾಗಿ 61 ಮತಗಳು ಬಂದವು.
ಬೆಳಿಗ್ಗೆ 11ಕ್ಕೆ ಸದನಲ್ಲಿ ಗೃಹ ಸಚಿವ ಅಮಿತ್ ಶಾ ಅವರು ವಿಷಯ ಮಂಡಿಸಿದರು. ಇದಾಗುತ್ತಿದ್ದಂತೆ, ಸರ್ಕಾರದ ಈ ನಿರ್ಧಾರಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ದಿನದ ಕಲಾಪದ ಅಂತ್ಯದ ವರೆಗೆ ನಡೆದ ಸುದೀರ್ಘ ಚರ್ಚೆ ಮತ್ತು ವಿರೋಧಗಳ ಮಧ್ಯೆಯೇ ವಿಧೇಯಕವನ್ನು ಮತಕ್ಕೆ ಹಾಕಲಾಯಿತು. ಪರವಾಗಿ 125 ಮತ, ವಿರೋಧವಾಗಿ 61 ಮತ ಬಿದ್ದವು.
ಪರ ಮತ್ತು ವಿರೋಧವಾಗಿ ಬಂದ ಮತಗಳನ್ನು ಪ್ರಕಟಿಸಿದ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರು ಕಲಾಪವನ್ನು ಮಂಗಳವಾರ ಬೆಳಿಗ್ಗೆ 11ಕ್ಕೆ ಮುಂದೂಡಿದರು.
ಸದನದಲ್ಲಿ ವಿಧೇಯಕ ಅನುಮೋದನೆ ಪಡೆದು, ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸಿದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.