ADVERTISEMENT

Jaipur Literature Festival 2024: ಫೆ. 1ರಿಂದ ಜೈಪುರ ಸಾಹಿತ್ಯ ಉತ್ಸವ

ಪಿಟಿಐ
Published 23 ಜನವರಿ 2024, 15:39 IST
Last Updated 23 ಜನವರಿ 2024, 15:39 IST
<div class="paragraphs"><p>ಜೈಪುರ ಸಾಹಿತ್ಯ ಉತ್ಸವ </p></div>

ಜೈಪುರ ಸಾಹಿತ್ಯ ಉತ್ಸವ

   

-ಸಾಂದರ್ಭಿಕ ಚಿತ್ರ

ಜೈಪುರ: ಪ್ರತಿಷ್ಠಿತ ಜೈಪುರ ಸಾಹಿತ್ಯ ಉತ್ಸವದ (ಜೆಎಲ್‌ಎಫ್‌) 17ನೇ ಆವೃತಿಯು ಫೆಬ್ರುವರಿ 1ರಿಂದ ಆರಂಭವಾಗಲಿದ್ದು, ದೇಶ, ವಿದೇಶಗಳ ಸುಮಾರು 550 ಲೇಖಕರು ಮತ್ತು ಕಲಾವಿದರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಐದು ದಿನಗಳ ಸಾಹಿತ್ಯ ಉತ್ಸವ ಇದಾಗಿದ್ದು, ಈ ಬಾರಿಯ ವಸ್ತುವಿಷಯ ‘ಸ್ಟೋರೀಸ್‌ ಯುನೈಟ್ ಅಸ್‌’ (ಕಥೆಗಳು ನಮ್ಮನ್ನು ಒಗ್ಗೂಡಿಸುತ್ತವೆ) ಎಂಬುದಾಗಿದೆ. ಸಾಹಿತ್ಯಕ್ಕಿರುವ ಪರಿವರ್ತನಾ ಶಕ್ತಿ, ಸಾಹಿತ್ಯವು ಹೇಗೆ ಸಮಾಜವನ್ನು ಪ್ರತಿಬಿಂಬಿಸುತ್ತದೆ ಮತ್ತು ಜನರನ್ನು ಹೇಗೆ ಒಗ್ಗೂಡಿಸುತ್ತದೆ ಎಂಬ ಅಂಶಗಳನ್ನು ಅನ್ವೇಷಿಸುವ ಗುರಿಯನ್ನು ಈ ಬಾರಿಯ ಜೆಎಲ್‌ಎಫ್‌ ಹೊಂದಿದೆ.  

‘ಜೈಪುರದ ಕ್ಲಾರ್ಕ್ಸ್‌ ಅಮೆರ್‌ ಹೋಟೆಲ್‌ನಲ್ಲಿ ಈ ಬಾರಿಯ ಜೆಎಲ್‌ಎಫ್‌ ಜರುಗಲಿದೆ. ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಸಾಹಿತ್ಯಾಸಕ್ತರಿಗೆ ಆಮಂತ್ರಿಸುತ್ತೇವೆ. ಜಾಗತಿಕ ಸಾಹಿತ್ಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯವನ್ನು ನಾವೆಲ್ಲರೂ ಒಟ್ಟಾಗಿ ರಚಿಸೋಣ’ ಎಂದು ಜೆಎಲ್‌ಎಫ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.