ರಾಂಚಿ: ಮುಂಬರುವ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷ (ಜೆಎಂಎಂ) 35 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಹಾಲಿ ಸಿಎಂ ಹೇಮಂತ್ ಸೊರೇನ್ ಅವರು ಬರ್ಹೈತ್‌ನಿಂದ ಕಣಕ್ಕಿಳಿದಿದ್ದಾರೆ.
ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಸೊರೇನ್ ಅವರು ಗಾಂಡೇಯ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಹೇಮಂತ್ ಸೊರೇನ್ ಸಹೋದರ ಬಸಂತ್ ಸೊರೇನ್ ದುಮ್ಕಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರೆ, ಸ್ಪೀಕರ್ ರವೀಂದ್ರನಾಥ್ ಮಹತೋ ನಾಲಾದಿಂದ, ಸಚಿವ ಮಿಥಿಲೇಶ್ ಠಾಕೂರ್ ಗರ್ವಾದಿಂದ, ಸೋನು ಸುದಿವ್ಯಾ ಗಿರಿದಿಹ್‌ನಿಂದ ಮತ್ತು ಬೇಬಿ ದೇವಿ ಡುಮ್ರಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷ ತಿಳಿಸಿದೆ.
ಜೆಎಂಎಂನ ಇತರೆ ಅಭ್ಯರ್ಥಿಗಳಲ್ಲಿ ಚೈಬಾಸಾದಿಂದ ದೀಪಕ್ ಬಿರುವಾ ಮತ್ತು ಇತ್ತೀಚೆಗೆ ಬಿಜೆಪಿ ತೊರೆದು ಪಕ್ಷಕ್ಕೆ ಸೇರ್ಪಡೆಗೊಂಡ ಹಾಲಿ ಶಾಸಕ ಕೇದರ್ ಹಜಾರಾ ಜಮುವಾದಿಂದ ಕಣಕ್ಕಿಳಿಯಲಿದ್ದಾರೆ.
ನವೆಂಬರ್ 13 ಮತ್ತು 20 ರಂದು ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.