ADVERTISEMENT

ಜೆಎನ್‌ಯು: ಅಲ್ಪಾವಧಿ ಆನ್‌ಲೈನ್‌ ಕೋರ್ಸ್‌

ಪಿಟಿಐ
Published 2 ಫೆಬ್ರುವರಿ 2024, 15:21 IST
Last Updated 2 ಫೆಬ್ರುವರಿ 2024, 15:21 IST
   

ನವದೆಹಲಿ : ದೇಶದಾದ್ಯಂತ ವಿದ್ಯಾರ್ಥಿಗಳಿಗಾಗಿ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯವು (ಜೆಎನ್‌ಯು) ವಿವಿಧ ವಿಷಯಗಳಲ್ಲಿ ಅಲ್ಪಾವಧಿಯ ಆನ್‌ಲೈನ್‌ ಕಲಿಕಾ ಕೋರ್ಸ್‌ಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ. ಈ ಮೂಲಕ ಜೆಎನ್‌ಯು ‘ಇ–ಕಲಿಕಾ’ ಕ್ಷೇತ್ರದಲ್ಲಿಯೂ ಛಾಪು ಮೂಡಿಸಲು ಮುಂದಾಗಿದೆ.

ಇದಕ್ಕಾಗಿ ವಿಶ್ವವಿದ್ಯಾಲಯದಲ್ಲಿ ‘ಇ– ಕಲಿಕೆ’ಗೆ ಪೂರಕವಾದ ಮೂಲಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿ.ವಿ ಕಾರ್ಯೋನ್ಮುಖವಾಗಿದೆ ಎಂದು ವಿ.ವಿ ಅಧಿಕಾರಿಗಳು ತಿಳಿಸಿದರು. 

ಜೆಎನ್‌ಯು ₹ 455 ಕೋಟಿ ಎಚ್‌ಇಎಫ್‌ಎ ಸಾಲವನ್ನು ಪಡೆದಿದ್ದು, ಈ ಕೋರ್ಸ್‌ಗಳಿಗೆ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುವುದು. ಅಲ್ಲದೆ ಅಧ್ಯಾಪಕರ ಮೂಲಕ ವಿವಿಧ ಕೋರ್ಸ್‌ಗಳ ವಿನ್ಯಾಸವನ್ನೂ ರೂಪಿಸಲಾಗುವುದು ಎಂದು ಜೆಎನ್‌ಯು ವಿಶೇಷ ಇ–ಲರ್ನಿಂಗ್‌ ಕೇಂದ್ರದ ಅಧ್ಯಕ್ಷ ಬಿ.ಎಸ್.ಬಾಲಾಜಿ ಹೇಳಿದರು. 

ADVERTISEMENT

ಕ್ಯಾಮೆರಾ, ಬೆಳಕು ಮತ್ತು ಧ್ವನಿ ನಿರೋಧಕ ಸೌಲಭ್ಯಗಳೊಂದಿಗೆ ವಿಡಿಯೊ ರೆಕಾರ್ಡಿಂಗ್‌ ಕೊಠಡಿಯನ್ನು ಸ್ಥಾಪಿಸುವ ಯೋಜನೆಯನ್ನು ವಿ.ವಿ ಹೊಂದಿದೆ ಎಂದರು.

ಹವಾಮಾನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂದಿಸಿದಂತೆ ಆನ್‌ಲೈನ್‌ ಕೋರ್ಸ್‌ ಅನ್ನು ಪದವಿ ವಿದ್ಯಾರ್ಥಿಗಳಿಗಾಗಿ ಈ ವರ್ಷ ಆರಂಭಿಸಲಾಗುವುದು. ನಾಲ್ಕು ಕ್ರೆಡಿಟ್‌ ಅಂಕಗಳನ್ನು ಹೊಂದಿರುವ, 15 ವಾರಗಳ ಅವಧಿಯ ಕೋರ್ಸ್‌ ಇದಾಗಿದೆ ಎಂದು ಬಾಲಾಜಿ ಹೇಳಿದರು.

ಅಂತರರಾಷ್ಟ್ರೀಯ ಸಂಬಂಧಗಳು, ರಾಜ್ಯಶಾಸ್ತ್ರ, ಸಮಾಜ ವಿಜ್ಞಾನ, ಭಾಷಾ ವಿಷಯಗಳಿಗೆ ಸಂಬಂಧಿಸಿದ ಅಲ್ಪಾವಧಿಯ ಆನ್‌ಲೈನ್‌ ಕೋರ್ಸ್‌ಗಳನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸುವ ಯೋಜನೆ ಇದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.