ADVERTISEMENT

ವಿದ್ಯಾರ್ಥಿಗಳೇ, ಕ್ಯಾಂಪಸ್‌ಗೆ ಮರಳಿ ಬನ್ನಿ: ಜೆಎನ್‌ಯು ಉಪಕುಲಪತಿ 

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 14:12 IST
Last Updated 7 ಜನವರಿ 2020, 14:12 IST
 ಜಗದೀಶ್ ಎಂ ಕುಮಾರ್
ಜಗದೀಶ್ ಎಂ ಕುಮಾರ್    

ನವದೆಹಲಿ: ವಿದ್ಯಾರ್ಥಿ ಮತ್ತು ಶಿಕ್ಷಕರ ಮೇಲೆ ಗುಂಪೊಂದು ದಾಳಿ ನಡೆಸಿರುವುದು ದುರದೃಷ್ಟಕರ ಮತ್ತು ನೋವಿನ ಸಂಗತಿ ಎಂದು ಜೆಎನ್‌ಯು ಉಪ ಕುಲಪತಿ ಜಗದೀಶ್ ಎಂ ಕುಮಾರ್ ಹೇಳಿದ್ದಾರೆ.

ಮುಸುಕುಧಾರಿಗಳ ಗುಂಪೊಂದು ರಾಡ್ ಮತ್ತು ಬೆತ್ತ ಹಿಡಿದು ಕ್ಯಾಂಪಸ್‌ನೊಳಗೆ ನುಗ್ಗಿ ದಾಂದಲೆ ನಡೆಸಿ ಎರಡು ದಿನಗಳಾದ ನಂತರ ಉಪಕುಲಪತಿ ಮಂಗಳವಾರ ಮಧ್ಯಾಹ್ನ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳಿಗೆ ನಮ್ಮ ಹೃದಯ ಮಿಡಿದಿದೆ. ಜನವರಿ 5 ರಂದು ನಡೆದ ಘಟನೆ ದುರದೃಷ್ಟಕರ. ಯಾವುದೇ ಸಮಸ್ಯೆ ಬಂದರೂ ಅದನ್ನು ಚರ್ಚೆ ಮತ್ತು ಸಂವಾದಗಳ ಮೂಲಕ ಪರಿಹರಿಸುವ ಕ್ಯಾಂಪಸ್ ನಮ್ಮದು. ಹಿಂಸೆ ಯಾವುದಕ್ಕೂ ಪರಿಹಾರವಲ್ಲ. ವಿಶ್ವವಿದ್ಯಾಲಯ ಯಥಾಸ್ಥಿತಿಗೆ ಮರಳುವಂತೆ ಮಾಡುತ್ತೇವೆ. ಎಲ್ಲರೂ ಕ್ಯಾಂಪಸ್‌ಗೆ ಮರಳಿ ಬರಬೇಕು ಎಂದು ನಾನು ವಿನಂತಿಸುತ್ತಿದ್ದೇನೆ. ನಡೆದುದ್ದನ್ನು ಮರೆತು ಹೊಸ ಆರಂಭ ಮಾಡೋಣ ಎಂದು ಉಪಕುಲಪತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.