ADVERTISEMENT

ಜೆಎನ್‌ಯು ಕುಲಪತಿ ರಾಜೀನಾಮೆಗೆ ಆಗ್ರಹ

ವಿದ್ಯಾರ್ಥಿಗಳ ಪ್ರತಿಭಟನೆ

ಪಿಟಿಐ
Published 9 ಜನವರಿ 2020, 20:00 IST
Last Updated 9 ಜನವರಿ 2020, 20:00 IST
ನವದೆಹಲಿಯ ಶಾಸ್ತ್ರಿ ಭವನದ ಎದುರು ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು
ನವದೆಹಲಿಯ ಶಾಸ್ತ್ರಿ ಭವನದ ಎದುರು ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು   

ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಆವರಣದಲ್ಲಿ ಮುಸುಕುಧಾರಿ ದುಷ್ಕರ್ಮಿಗಳು ನಡೆಸಿದ ದಾಂದಲೆ ಕೃತ್ಯದ ವಿರುದ್ಧ ಆಕ್ರೋಶ ಹೆಚ್ಚಿದ್ದು, ಕುಲಪತಿ ರಾಜೀನಾಮೆ ನೀಡಬೇಕು ಎನ್ನುವ ಆಗ್ರಹ ತೀವ್ರಗೊಂಡಿದೆ.

ಕುಲಪತಿ ರಾಜೀನಾಮೆಗೆ ಆಗ್ರಹಿಸಿ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ದೆಹಲಿಯ ಮಂಡಿ ಹೌಸ್‌ನಿಂದ. ಮಾನವ ಸಂಪನ್ಮೂಲ ಸಚಿವಾಲಯದ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.

ಪ್ರತಿಭಟನಾಕಾರರು ಕುಲಪತಿ ವಿರುದ್ಧ ಘೋಷಣೆ ಕೂಗಿದರು. ‘ನೋ ಸಿಎಎ, ನೋ ಎನ್‌ಆರ್‌ಸಿ’ ಹಾಗೂ ವಿ.ವಿ. ಕ್ಯಾಂಪಸ್‌ನಿಂದ ಎಬಿವಿಪಿ ನಿಷೇಧಿಸಿ’ ಘೋಷಣೆಗಳಿದ್ದ ಭಿತ್ತಿಫಲಕಗಳು ರಾರಾಜಿಸಿದವು.

ADVERTISEMENT

ಸಿಪಿಎಂ ಮುಖಂಡರಾದ ಸೀತಾರಾಂ ಯೆಚೂರಿ, ಡಿ.ರಾಜಾ, ಪ್ರಕಾಶ್‌ ಕಾರಟ್‌, ಬೃಂದಾ ಕಾರಟ್‌, ಎಲ್‌ಜೆಡಿ ನಾಯಕ ಶರದ್‌ ಯಾದವ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ದುಷ್ಕರ್ಮಿಗಳು ಮೂರು ಗಂಟೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಥಳಿಸುತ್ತಾರೆ. ಮುಖ್ಯ ಗೇಟ್‌
ನಲ್ಲಿ ಪೊಲೀಸರಿದ್ದಾಗಲೇ ಇದು ನಡೆಯುತ್ತದೆ. ಕುಲಪತಿಗೆ ತಿಳಿಯದೇ ಘಟನೆ ನಡೆಯದಿರಲು ಸಾಧ್ಯವಿಲ್ಲ’ ಎಂದು ಯೆಚೂರಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.