ಸಾರ್ವಜನಿಕರ ನೆರವಿಗಾಗಿ ಸಂಗ್ರಹಿಸಿದ್ದ ದೇಣಿಗೆ ಮೊತ್ತವನ್ನು ವೈಯಕ್ತಿಕ ಉದ್ದೇಶಕ್ಕೆ ಬಳಸಿರುವ ಆರೋಪ ಎದುರಿಸುತ್ತಿರುವಪತ್ರಕರ್ತೆ ರಾಣಾ ಅಯೂಬ್ ಅವರನ್ನು ಲಂಡನ್‌ಗೆ ತೆರಳದಂತೆ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಒಂದು ವಾರದ ಹಿಂದೆಯೇ ಕಾರ್ಯಕ್ರಮ ಕುರಿತಾಗಿ ಮಾಹಿತಿ ನೀಡಿದ್ದರೂ ಅಧಿಕಾರಿಗಳಿಂದ ಅನಿರೀಕ್ಷಿತವಾಗಿ ಈ ಕ್ರಮ ಎದುರಾಗಿದೆ ಎಂದುಟ್ವೀಟ್ ಮಾಡಿದ್ದಾರೆ.
ಲಂಡನ್‌ನಲ್ಲಿ ನಡೆಯುತ್ತಿರುವ ಪತ್ರಿಕೋದ್ಯಮ ಉತ್ಸವಕ್ಕೆ ತೆರಳಲುನಾನು ಮುಂಬೈ ವಿಮಾನ ನಿಲ್ದಾಣಕ್ಕೆ ಹೋಗಿದ್ದೆ.ಅಲ್ಲಿ ಅಧಿಕಾರಿಗಳು ಅನಿರೀಕ್ಷಿತವಾಗಿ ತಡೆದಿದ್ದಾರೆ. ಆ ಉತ್ಸವದಲ್ಲಿ ನಾನು ‘ಭಾರತೀಯ ಪ್ರಜಾಪ್ರಭುತ್ವ’ಕುರಿತಂತೆ ಭಾಷಣೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಲಂಡನ್‌ಗೆ ತೆರಳುವುದಾಗಿ ನಾನು ಒಂದು ವಾರ ಮುಂಚೆಯೇ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿದ್ದೆ. ಆದರೂ ಈ ಕ್ರಮ ಎದುರಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ಪತ್ರಕರ್ತೆ ರಾಣಾ ಅಯೂಬ್ ಅವರಿಗೆ ಸೇರಿದ್ದ ₹1.77 ಕೋಟಿ ಮೊತ್ತವನ್ನು ಜಪ್ತಿ ಮಾಡಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಪತ್ರಕರ್ತೆ ಮತ್ತು ಆಕೆಯ ಕುಟುಂಬ ಸದಸ್ಯರ ಹೆಸರಿನಲ್ಲಿ ನಿಶ್ಚಿತ ಠೇವಣಿ ಮತ್ತು ಇತರೆ ಖಾತೆಗಳಲ್ಲಿದ್ದ ಹಣವನ್ನು ಜಪ್ತಿ ಮಾಡಲಾಗಿದೆ.
ಹಣ ದುರ್ಬಳಕೆ ಮಾಡಿಕೊಂಡಿದ್ದ ಸಂಬಂದ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಪೋಲೀಸರು ಸೆಪ್ಟೆಂಬರ್ 2021ರಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಸಂಬಂಧಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.