ADVERTISEMENT

ನ್ಯಾಯಾಂಗ ಅಧಿಕಾರ ವ್ಯಾಪ್ತಿ ತತ್ವ ಪಾಲಿಸುವ ನಿರೀಕ್ಷೆ ಇದೆ: ಸ್ಪೀಕರ್‌ ಓಂ ಬಿರ್ಲಾ

ಪಿಟಿಐ
Published 11 ಜನವರಿ 2023, 19:30 IST
Last Updated 11 ಜನವರಿ 2023, 19:30 IST
ಓಂ ಬಿರ್ಲಾ
ಓಂ ಬಿರ್ಲಾ   

ಜೈಪುರ: ‘ಸಂವಿಧಾನದಲ್ಲಿ ತಿಳಿಸಿದಂತೆ ಅಧಿಕಾರದ ಪ್ರತ್ಯೇಕತೆಯ ತತ್ವಗಳನ್ನು ನ್ಯಾಯಾಂಗ ಪಾಲಿಸುತ್ತದೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ’ ಎಂದು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಹೇಳಿದರು.

ಇಲ್ಲಿ ಬುಧವಾರ ನಡೆದ 83ನೇ ಅಖಿಲ ಭಾರತ ಸ್ಪೀಕರ್‌ಗಳ ಸಮ್ಮೇಳನದಲ್ಲಿ (ಎಐಪಿಒಸಿ) ಮಾತನಾಡಿದ ಅವರು, ‘ದೇಶದ ಶಾಸಕಾಂಗಗಳು ನ್ಯಾಯಾಂಗದ ಅಧಿಕಾರವನ್ನು ಸದಾ ಗೌರವಿಸಿವೆ. ನ್ಯಾಯಾಂಗವು ಕೂಡ ಸಂವಿಧಾನಬದ್ಧ ಅಧಿಕಾರಗಳ ಪ್ರತ್ಯೇಕತೆ ಮತ್ತು ಸಮತೋಲನದ ತತ್ವ ಪಾಲಿಸುವ ವಿಶ್ವಾಸವಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ಸಾಮರಸ್ಯದ ಅಗತ್ಯತೆ ಪ್ರತಿಪಾದಿಸಿದ ಅವರು, ‘ಪ್ರಜಾಪ್ರಭುತ್ವದ ಮೂರೂ ಅಂಗಗಳು ಪರಸ್ಪರ ಕಾಳಜಿ, ನಂಬಿಕೆಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ಹೇಳಿದರು.

ADVERTISEMENT

ಜನರ ದೃಷ್ಟಿಯಲ್ಲಿ ಶಾಸಕಾಂಗದ ಸ್ವರೂಪವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸುಧಾರಿಸುವ ಅವಶ್ಯಕತೆ ಇದೆ ಎಂದೂ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.