ಬೆಂಗಳೂರು: ಲೋಕಸಭೆ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಚರ್ಚೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಳಸಿದ ಜುಮ್ಲಾ ಪದದ ಅರ್ಥ ಏನೆಂದು ತಿಳಿಯಲು ಜನರು ಗೂಗಲ್ ಮೊರೆ ಹೋಗಿದ್ದಾರೆ. ಶುಕ್ರವಾರ ಅಧಿವೇಶನ ನಡೆಯುತ್ತಿದ್ದಂತೆ ಜನರುಗೂಗಲ್‍ನಲ್ಲಿ ಜುಮ್ಲಾಎಂಬ ಪದದ ಅರ್ಥ ತಿಳಿಯಲು ಜನರು ಹುಡುಕಾಟ ನಡೆಸಿದ್ದಾರೆ.ಹೀಗೆ ಅರ್ಥ ಹುಡುಕಿದವರಲ್ಲಿ ದಕ್ಷಿಣ ಭಾರತೀಯರೇ ಹೆಚ್ಚು.
ರಾಹುಲ್ ಭಾಷಣದಲ್ಲಿ ಹೇಳಿದ್ದೇನು?
ಶ್ರೀ. ಗಲ್ಲಾ (ಜಯದೇವ ಗಲ್ಲಾ) ನಿಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದ ನೋವು, ಆತಂಕವನ್ನು ನಾನು ಗ್ರಹಿಸಬಲ್ಲೆ.ನೀವು 21ನೇ ಶತಮಾನದ ರಾಜಕೀಯ ಆಯುಧದ ಸಂತ್ರಸ್ತರು.ಆ ಆಯುಧದ ಹೆಸರು ಜುಮ್ಲಾ ಸ್ಟ್ರೈಕ್, ಜುಮ್ಲಾ ಸ್ಟೈಕ್ ನ ಲಕ್ಷಣಗಳು ಹೀಗಿವೆ- ಮೊದಲು ಖುಷಿ ಮತ್ತು ಸಡಗರ ಇರುತ್ತದೆ.ಆಮೇಲೆ ಶಾಕ್, ಇದೆಲ್ಲದರ ನಂತರ 8 ಗಂಟೆ ಅವಧಿಯ ಭಾಷಣವಿರುತ್ತದೆ. ದೇಶದಲ್ಲಿರುವ ರೈತರು, ಯುವ ಜನತೆ, ದಲಿತ, ಬುಡಕಟ್ಟು ಜನಾಂಗ ಮತ್ತು ಮಹಿಳೆಯರೆಲ್ಲರೂ ಇದರ ಸಂತ್ರಸ್ತರಾಗಿರುತ್ತಾರೆ.
ಜುಮ್ಲಾ ಎಂಬುದು ಹಿಂದಿ ಪದ ಆಗಿದ್ದರಿಂದ ದಕ್ಷಿಣ ಭಾರತೀಯರಿಗೆ ಈ ಪದದ ಅರ್ಥ ಗೊತ್ತಾಗಲಿಲ್ಲ.ಹಾಗಾಗಿ ಗೂಗಲ್ ಸಹಾಯ ಪಡೆಯಬೇಕಾಯಿತು. ಅಂದಹಾಗೆ ಜುಮ್ಲಾ ಎಂಬ ಪದದ ಅರ್ಥ ಸುಳ್ಳು ಭರವಸೆ.
ಗೂಗಲ್ ಟ್ರೆಂಡ್ ಹೀಗಿದೆ
ರಾಹುಲ್ ಭಾಷಣದ ಹೊತ್ತಲ್ಲಿ ಜುಮ್ಲಾಎಂಬ ಪದದ ಅರ್ಥ ಹುಡುಕಿದವರಲ್ಲಿ ಕರ್ನಾಟಕದವರೇ ಜಾಸ್ತಿ ಎಂಬ ಮಾಹಿತಿ ಗೂಗಲ್ ಟ್ರೆಂಡ್‍ನಲ್ಲಿ ತೋರಿಸಿತ್ತು. ಈ ಪದ ಹುಡುಕಾಡಿದವರಲ್ಲಿ ಬೆಂಗಳೂರಿಗರೇ ಜಾಸ್ತಿ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.