ನವದೆಹಲಿ: ದೇಶದಾದ್ಯಂತ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ದೇಶದ ಉತ್ತರ ಮತ್ತು ವಾಯುವ್ಯ ಪ್ರದೇಶಗಳಲ್ಲಿ ತೀವ್ರ ತಾಪಮಾನ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಹೇಳಿದೆ.
ಮುಂಗಾರು ಮಳೆ ಕುರಿತು ಮುನ್ಸೂಚನೆ ನೀಡಿರುವ ಐಎಂಡಿ, 'ಜೂನ್ ತಿಂಗಳಲ್ಲಿ ಸುರಿಯುವ ಒಟ್ಟಾರೆ ಮಳೆ ಪ್ರಮಾಣವು, ದೇಶದ ದೀರ್ಘಕಾಲದ ಸರಾಸರಿ (ಎಲ್‌ಪಿಎ) 92 ಸೆಂಟಿ ಮೀಟರ್‌ಗಿಂತಲೂ ಕಡಿಮೆ ಇರಲಿದೆ' ಎಂದು ಅಂದಾಜಿಸಿದೆ.
ಮೇ 30ರಂದು ಕೇರಳದಲ್ಲಿ ನೈಋತ್ಯ ಮುಂಗಾರು ಆರಂಭವಾದಾಗಿನಿಂದ ಶೇ 20ರಷ್ಟು ಮಳೆ ಕೊರೆತೆಯಾಗಿದೆ ಎಂದೂ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.