ADVERTISEMENT

ಕೋಲ್ಕತ್ತ ಅತ್ಯಾಚಾರ ಪ್ರಕರಣ: ಕಿರಿಯ ವೈದ್ಯರ ಉಪವಾಸ ಸತ್ಯಾಗ್ರಹ 5ನೇ ದಿನಕ್ಕೆ

ಪಿಟಿಐ
Published 10 ಅಕ್ಟೋಬರ್ 2024, 13:58 IST
Last Updated 10 ಅಕ್ಟೋಬರ್ 2024, 13:58 IST
   

ಕೋಲ್ಕತ್ತ: ಆರ್.ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆಯನ್ನು ಖಂಡಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವು ಸತತ ಐದನೆಯ ದಿನವೂ ಮುಂದುವರಿದಿದೆ. ಪಶ್ಚಿಮ ಬಂಗಾಳದಾದ್ಯಂತ ದುರ್ಗಾ ಪೂಜೆಯ ಸಂಭ್ರಮ ಮನೆ ಮಾಡಿದ್ದರೂ, ಕಿರಿಯ ವೈದ್ಯರು ಆಮರಣಾಂತ ಉಪವಾಸದಿಂದ ಹಿಂದೆ ಸರಿದಿಲ್ಲ.

ಕಿರಿಯ ವೈದ್ಯರು ಕೋಲ್ಕತ್ತದ ಹೃದಯ ಭಾಗದಲ್ಲಿ ಶನಿವಾರದಿಂದ ಉಪವಾಸ ಆರಂಭಿಸಿದ್ದಾರೆ. ಪ್ರತಿಭಟನೆಯಲ್ಲಿ ತೊಡಗಿರುವವರ ಜೊತೆ ಪಶ್ಚಿಮ ಬಂಗಾಳ ಸರ್ಕಾರವು ಬುಧವಾರ ಸಂಜೆ ಸಭೆ ನಡೆಸಿತಾದರೂ ಅದು ಫಲಪ್ರದ ಆಗಲಿಲ್ಲ.

ಮಾತಿನ ಭರವಸೆ ಹೊರತುಪಡಿಸಿದರೆ ಸರ್ಕಾರದಿಂದ ಬೇರೆ ಏನೂ ಸಿಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ದುರ್ಗಾ ಪೂಜೆ ನಡೆಯುವ ಸ್ಥಳಗಳ ಹೊರಗಡೆ ಪ್ರತಿಭಟನೆ ನಡೆಸಿ, ಕರಪತ್ರಗಳನ್ನು ಹಂಚುತ್ತಿದ್ದ ಕೆಲವು ವೈದ್ಯರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ಪ್ರತಿಭಟನಾನಿರತ ವೈದ್ಯರು ಆರೋಪಿಸಿದರು. ಪೊಲೀಸರ ನಡೆಯನ್ನು ಅವರು ಖಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.