ADVERTISEMENT

ಕ್ರೀಡಾಪಟುಗಳು ಹೊರ ಬಂದು ಹಿಂಸೆಯನ್ನು ಖಂಡಿಸಬೇಕು: ಜ್ವಾಲಾ ಗುಟ್ಟಾ ಮನವಿ

ಏಜೆನ್ಸೀಸ್
Published 23 ಡಿಸೆಂಬರ್ 2019, 9:35 IST
Last Updated 23 ಡಿಸೆಂಬರ್ 2019, 9:35 IST
ಜ್ವಾಲಾ ಗುಟ್ಟಾ
ಜ್ವಾಲಾ ಗುಟ್ಟಾ   

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ದೇಶದಾದ್ಯಂತ ಪ್ರತಿಭಟನೆಯ ಕಿಚ್ಚು ಜೋರಾಗಿರುವ ನಡುವೆಯೇ ಬ್ಯಾಡ್ಮಿಂಟನ್‌ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ಭಾರತೀಯ ಕ್ರೀಡಾಪಟುಗಳಿಗೆ ‘ಹಿಂಸೆಯನ್ನು ಖಂಡಿಸಿ’ ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ವಿಡಿಯೊ ಹಾಕಿರುವ ಗುಟ್ಟಾ ಅವರು ದೇಶದ ಕ್ರೀಡಾಪಟುಗಳನ್ನು ‘ಶಾಂತಿ ರಾಯಭಾರಿ’ಗಳು ಎಂದು ಕರೆದಿದ್ದಾರೆ.

‘ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿರುವ ಸುದ್ದಿಗಳನ್ನು ನಾವು ನೋಡುತ್ತಿದ್ದೇವೆ ಮತ್ತು ಅದರಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಜನರ ಮೇಲೆ ಆಗುತ್ತಿರುವ ಹಿಂಸೆ ಮತ್ತು ಹಿಂಸೆಯನ್ನು ಸೃಷ್ಟಿಸುತ್ತಿರುವ ಜನರು. ಇತಂಹ ಸ್ಥಿತಿಯನ್ನು ನಾನು ನಿರೀಕ್ಷಿಸಿರಲಿಲ್ಲ. ದಯವಿಟ್ಟು ಎಲ್ಲಾ ಕ್ರೀಡಾಪಟುಗಳು ಹೊರಬಂದು, ನಡೆಯುತ್ತಿರುವ ಹಿಂಸೆಯನ್ನು ಖಂಡಿಸಿ. ಏಕೆಂದರೆ ನಾವು, ಈ ದೇಶದ ಶಾಂತಿ ರಾಯಭಾರಿಗಳು. ಕನಿಷ್ಠ ಇದನ್ನಾದರೂ ನಾವು ಮಾಡಬಹುದು’ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.