ಗುನಾ: ‘ಸಿಂಧಿಯಾ ಕುಟುಂಬದ ರಾಜ ಕಾಂಗ್ರೆಸ್ ಪಕ್ಷಕ್ಕೆ ಹೀಗೆ ವಿಶ್ವಾಸಘಾತ ಮಾಡುತ್ತಾರೆಂದು ನಾನು ಭಾವಿಸಿರಲಿಲ್ಲ’ ಎಂದು ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಬಗ್ಗೆ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಅವರಿಗೆ ಕಾಂಗ್ರೆಸ್ ಏನೆಲ್ಲಾ ಕೊಟ್ಟಿಲ್ಲ? ಮೊದಲು ದೊಡ್ಡ ಮಹಾರಾಜ (ಮಾಧವರಾವ್ ಸಿಂಧಿಯಾ) ಅವರನ್ನು ಇಲ್ಲಿಂದ ಸಂಸದರಾಗಿ ಮಾಡಿದೆವು. ಬಳಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರು ಮಂತ್ರಿ ಮಾಡಿದರು. ಜ್ಯೋತಿರಾಧಿತ್ಯ ಸಿಂಧಿಯಾ ಅವರು ಕಾಂಗ್ರೆಸ್ ಬಂದರು. ಅವರನ್ನು ಸಂಸದರನ್ನಾಗಿ, ಎರಡು ಬಾರಿ ಸಚಿವವರನ್ನಾಗಿ ಮಾಡಿದೆವು. ಅವರು ಪಕ್ಷ ಬಿಡಲು ಕಾರಣ ಏನು?’ ಎಂದು ದಿಗ್ವಿಜಯ ಸಿಂಗ್ ಪ್ರಶ್ನೆ ಮಾಡಿದರು.
2020ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಜ್ಯೋತಿರಾಧಿತ್ಯ ಸಿಂಧಿಯಾ, ಮಧ್ಯಪ್ರದೇಶದ ಕಮಲ್‌ನಾಥ್ ಅವರ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಬೆಂಬಲಿಗ ಶಾಸಕರನ್ನು ರಾಜೀನಾಮೆ ನೀಡಿಸಿ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು.
ಇದೀಗ ಸಿಂಧಿಯಾ ಅವರು ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.