ಬೆಂಗಳೂರು: ‘ಶೃಂಗಾರ‘ದ ಬಗ್ಗೆ ವರ್ಣನೆ, ಅದರ ಮಹತ್ವವನ್ನು ತಿಳಿಸಿಕೊಡುವ ವಾತ್ಸಾಯನನ 'ಕಾಮಸೂತ್ರ' ಗ್ರಂಥವು ಇಂದಿಗೂ ಕೂಡ ಸದಾ ಚರ್ಚಿತ ವಿಷಯವೇ ಸರಿ. ಈ ಗ್ರಂಥ ಜಗತ್ತಿನ ಶೃಂಗಾರ ಕಾವ್ಯಕ್ಕೆ ಒಂದು ಕೊಡುಗೆ ಎಂದು ಪರಿಗಣಿಸಲಾಗುತ್ತದೆ.
‘ಕಾಮಸೂತ್ರ‘ದ ಬಗ್ಗೆ ಸಾಂಪ್ರದಾಯಿಕ ಭಾರತೀಯರು ಹಲವು ಸಂದರ್ಭಗಳಲ್ಲಿ ಸಿಡುಕು ಪ್ರದರ್ಶಿಸಿದ್ದಾರೆ. ಇದೀಗ ಇಂತಹುದೇಘಟನೆ ಮತ್ತೊಂದು ನಡೆದಿದೆ. ಆ ಬಗ್ಗೆ ಲೇಖಕಿ ತಸ್ಲಿಮಾ ನಸ್ರೀನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
‘ಇತ್ತೀಚೆಗೆ ಗುಜರಾತ್‌ನ ಅಹಮದಾಬಾದ್‌ನ ಬುಕ್‌ಸ್ಟಾಲ್ ಒಂದರಲ್ಲಿ ‘ಕಾಮಸೂತ್ರ‘ ಗ್ರಂಥವನ್ನು ಮಾರುತ್ತಿದ್ದಾರೆ, ಅದರಲ್ಲಿ ಹಿಂದೂ ದೇವರಗಳನ್ನು ಅಶ್ಲೀಲಭಂಗಿಯಲ್ಲಿ ತೋರಿಸಿದ್ದಾರೆ ಎಂದು ಆರೋಪಿಸಿ ಭಜರಂಗದಳ ಸೇರಿದಂತೆ ಕೆಲ ಹಿಂದೂ ಸಂಘಟನೆಗಳ ಯುವಕರು ಅಂಗಡಿಗೆ ಮುತ್ತಿಗೆ ಹಾಕಿದ್ದರು. ನಂತರ ಗ್ರಂಥವನ್ನು ಸುಟ್ಟು ಹಾಕಿದ್ದರು. ಈ ಗ್ರಂಥ ಹಿಂದೂಗಳ ಭಾವನೆಗೆ ದಕ್ಕೆ ತರುತ್ತಿದೆ ಎಂಬುದಾಗಿ ಆರೋಪಿಸಿದ್ದರು‘ ಎಂದು ‘ದಿ ವೈರ್‘ ಸುದ್ದಿ ಸಂಸ್ಥೆ ವರದಿ ಮಾಡಿತ್ತು.
ಈ ಬಗ್ಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಬಾಂಗ್ಲಾ ಮೂಲದ ಲೇಖಕಿ, ಆಗಾಗ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗುವ ತಸ್ಲಿಮಾ ನಸ್ರೀನ್ ಅವರು,‘ಕಾಮಸೂತ್ರ ಗ್ರಂಥ ಅತ್ಯಂತ ಹಳೆಯ ಭಾರತೀಯ ಶೃಂಗಾರಕಾವ್ಯ. ಇದರ ಪ್ರತಿಯನ್ನು ಕೆಲವರು ಭಾರತದಲ್ಲಿ ಸುಟ್ಟಿದ್ದಾರೆ. ಇದು ಜಗತ್ತಿಗೆ ಹೆಮ್ಮೆ ಅನಿಸುವುದಿಲ್ಲ. ಆದರೆ, 1800 ವರ್ಷಗಳ ಹಿಂದೆಯೇ ಇದನ್ನು ಬರೆದಿದ್ದಕ್ಕೆ ನಮಗೆ ಹೆಮ್ಮೆ ಇದೆ‘ ಎಂದು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಪರ ವಿರೋಧದ ಚರ್ಚೆಗಳು ಬಿರುಸು ಪಡೆದುಕೊಂಡಿವೆ. ಇನ್ನು ವಾತ್ಸಾಯನ ಎಂಬ ಸಂಸ್ಕೃತ ವಿದ್ವಾಂಸ ಕಾಮಸೂತ್ರ ಗ್ರಂಥವನ್ನು ರಚಿಸಿದ್ದು ಎನ್ನಲಾಗಿದೆ. ಇದು ಭಾರತೀಯ ಪುರಾತನ ಶೃಂಗಾರ ಕಾವ್ಯದ ಬಗ್ಗೆ ಹಾಗೂ ಲೈಂಗಿಕತೆಯ ಪ್ರಾಧಾನ್ಯವನ್ನು ವಿವರಿಸುತ್ತದೆ. ಇದು ಸಂಸ್ಕೃತದಲ್ಲಿ ರಚನೆಯಾಗಿದ್ದು, 1883 ರಲ್ಲಿ ಇಂಗ್ಲಿಷ್‌ನಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.