ಬೆಂಗಳೂರು:ಪ್ರಸ್ತಾವಿತ ಹೊಸ ಸಿನಿಮಾ ನೀತಿಯ ತಿದ್ದುಪಡಿ ಕುರಿತು ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ದನಿ ಎತ್ತಿದ್ದಾರೆ.
ಸಿನಿಮಾ ಸೆನ್ಸಾರ್ಮಂಡಳಿಯ ಮೇಲೆ ಕೇಂದ್ರ ಸರ್ಕಾರ ಹೆಚ್ಚಿನ ಹಿಡಿತ ಸಾಧಿಸುವ ಮತ್ತು ಸಿನಿಮಾಗಳನ್ನು ಮರುಪರಿಶೀಲನೆಗೆ ಒಳಪಡಿಸುವ ಕುರಿತು ಪ್ರಸ್ತಾವಿತ ತಿದ್ದುಪಡಿಯಲ್ಲಿ ಹೇಳಲಾಗಿದೆ.
ಹೊಸ ತಿದ್ದುಪಡಿಯನ್ನು ವಿರೋಧಿಸಿರುವ ನಟ ಕಮಲ್ ಹಾಸನ್, ಸಿನಿಮಾ, ಮಾಧ್ಯಮ ಮತ್ತು ಸಾಹಿತ್ಯ ಎನ್ನುವುದು ಮೂರು ಮಂಗಗಳಂತೆ ಇರಲು ಸಾಧ್ಯವಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ನಾವೆಲ್ಲರೂ ದನಿ ಎತ್ತಬೇಕಾಗಿದೆ, ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.
ನೂತನ ತಿದ್ದುಪಡಿ ನೀತಿ ಜಾರಿಗೆ ಬಂದರೆ, ಈಗಾಗಲೇ ಸೆನ್ಸಾರ್ ಮಂಡಳಿಯ ಅನುಮೋದನೆ ಪಡೆದಿರುವ ಸಿನಿಮಾಗಳನ್ನು ಮರುವಿಮರ್ಶೆಗೆ ಒಳಪಡಿಸುವ ಅಧಿಕಾರ ಕೇಂದ್ರಕ್ಕೆ ಲಭ್ಯವಾಗಲಿದೆ.
ಈ ಬಗ್ಗೆ ಈಗಾಗಲೇ ಸಿನಿಮಾ ರಂಗದ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.