ಚೆನ್ನೈ: ಕಾಶ್ಮೀರದಜನಾಭಿಪ್ರಾಯವನ್ನು ಕೇಳಬೇಕು.ಸರ್ಕಾರ ಇದಕ್ಕೆ ಹಿಂಜರಿಯುತ್ತಿರುವುದು ಯಾಕೆ? ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.
ಭಾನುವಾರ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಕ್ಕಳ್ ನೀತಿ ಮೈಯ್ಯಂ ನೇತಾರ ಕಮಲ್, ಕಾಶ್ಮೀರದಲ್ಲಿ ಭಾರತ ಯಾಕೆ ಜನಾಭಿಪ್ರಾಯ ಕೇಳಲ್ಲ? ಭಾರತ ಭಯ ಪಡುತ್ತಿರುವುದು ಯಾಕೆ? ಎಂದಿದ್ದಾರೆ.
ಅದೇ ವೇಳೆ ಪಾಕ್ ಆಕ್ರಮಿತ ಕಾಶ್ಮೀರವನ್ನು ಆಜಾದ್ ಕಾಶ್ಮೀರ್ ಎಂದ ಕಮಲ್, ಆಜಾದ್ ಕಾಶ್ಮೀರದ ರೈಲುಗಳಲ್ಲಿ ಜಿಹಾದಿಗಳ ಫೋಟೊವನ್ನಿಟ್ಟು ಅವರನ್ನು ಹೀರೊಗಳಂತೆ ಮೆರೆಸುತ್ತಾರೆ. ಇದೊಂದು ಮೂರ್ಖತನದ ಕೆಲಸ.ಇತ್ತ ಭಾರತವೂ ಇಂಥದ್ದೇ ಮೂರ್ಖತನದ ಕೆಲಸ ಮಾಡುತ್ತದೆ. ಇದು ಸರಿಯಲ್ಲ, ಭಾರತ ಇದಕ್ಕಿಂತ ಉತ್ತಮ ದೇಶ ಎಂದು ಸಾಬೀತು ಮಾಡಬೇಕಾದರೆ ನಾವು ಈ ರೀತಿ ವರ್ತಿಸಬಾರದು.ಇಲ್ಲಿಯೇ ರಾಜಕೀಯ ಆರಂಭವಾಗುವುದು.ರಾಜಕೀಯದ ಹೊಸ ರೀತಿ ಆರಂಭವಾಗುವುದು ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಸರಿಯಾಗಿ ವರ್ತಿಸಿದರೆ ಗಡಿ ನಿಯಂತ್ರಣಾ ರೇಖೆಯಲ್ಲಿಯೂ ಶಾಂತಿ ನೆಲೆಸುತ್ತದೆ.
ಯೋಧರು ಯಾಕೆ ಸಾಯುತ್ತಿದ್ದಾರೆ? ನಮ್ಮ ದೇಶದ ಗಡಿ ಕಾಯುತ್ತಿರುವ ಯೋಧರುಸಾಯುತ್ತಿರುವುದು ಯಾಕೆ? ಭಾರತ ಮತ್ತು ಪಾಕಿಸ್ತಾನ ಸರಿಯಾಗಿ ವರ್ತಿಸಿದರೆ ಯೋಧರು ಸಾಯಲ್ಲ.ಗಡಿ ನಿಯಂತ್ರಣಾ ರೇಖೆಯಲ್ಲಿಯೂ ಪರಿಸ್ಥಿತಿ ನಿಯಂತ್ರಣದಲ್ಲಿರುತ್ತದೆ.
ಏತನ್ಮಧ್ಯೆ, ಪುಲ್ವಾಮ ದಾಳಿ ಬಗ್ಗೆ ಕೇಳಿದಾಗ, ನಾನು ಮೈಯ್ಯಂ ಎಂಬ ನಿಯತಕಾಲಿಕೆಯಲ್ಲಿ ಕಾಶ್ಮೀರದ ಸಮಸ್ಯೆ ಬಗ್ಗೆ ಬರೆದಿದ್ದೆ. ಈಗ ಉಂಟಾಗಿರುವ ಪರಿಸ್ಥಿತಿ ಬಗ್ಗೆ ನಾನು ಅವತ್ತೇ ಹೇಳಿದ್ದೆ.ಕಾಶ್ಮೀರದಲ್ಲಿ ಜನಾಭಿಪ್ರಾಯ ಕೇಳಿ, ಜನರು ಮಾತನಾಡುವಂತೆ ಮಾಡಿ. ಸರ್ಕಾರ ಇಲ್ಲಿವರೆಗೆ ಇದನ್ನು ಯಾಕೆ ಮಾಡಿಲ್ಲ? ಅವರು ಭಯಪಡುತ್ತಿರುವುದಾದರೂ ಯಾಕೆ? ಅವರು ದೇಶವನ್ನು ವಿಭಜಿಸಲು ನೋಡುತ್ತಿದ್ದಾರೆ ಅಷ್ಟೇ ಎಂದಿದ್ದಾರೆ ಕಮಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.