ADVERTISEMENT

ಅಧ್ಯಕ್ಷೀಯ ಚುನಾವಣೆ: ಪ್ರಬಲ ಪೈಪೋಟಿ ನೀಡಿದ ಕಮಲಾ

ಪಿಟಿಐ
Published 7 ನವೆಂಬರ್ 2024, 1:00 IST
Last Updated 7 ನವೆಂಬರ್ 2024, 1:00 IST
<div class="paragraphs"><p>ಕಮಲಾ ಹ್ಯಾರಿಸ್‌</p></div>

ಕಮಲಾ ಹ್ಯಾರಿಸ್‌

   

ತಿರುವರೂರು (ತಮಿಳುನಾಡು): ಕಮಲಾ ಹ್ಯಾರಿಸ್‌ ಹೋರಾಟಗಾರ್ತಿ. ಈಗ ಸೋತಿರಬಹುದು. ಆದರೆ, ಖಂಡಿತವಾಗಿ ಮತ್ತೆ ಪುಟಿದೇಳುತ್ತಾರೆ...

ಇದು, ತಮಿಳುನಾಡುವಿನ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂ ಗ್ರಾಮದ ನಿವಾಸಿಗಳ ವಿಶ್ವಾಸ. ಇದು, ಕಮಲಾ ಅವರ ಪೂರ್ವಜರು ನೆಲೆಸಿದ್ದ ಊರು.

ADVERTISEMENT

ಅಧ್ಯಕ್ಷೀಯ ಚುನಾವಣೆಯ ಮತಎಣಿಕೆ ಆರಂಭವಾಗುತ್ತಿದಂತೆಯೇ ಸ್ಥಳೀಯರು ಟಿ.ವಿಯತ್ತಲೆ ದೃಷ್ಟಿ ನೆಟ್ಟಿದ್ದರು. ಫಲಿತಾಂಶದ ಬೆಳವಣಿಗೆಗಳನ್ನು ಗಮನಿಸುತ್ತಿದ್ದರು. ಕೆಲವರು ಸ್ಥಳೀಯ ಶ್ರೀ ಧರ್ಮಶಾಸ್ತಾ ಪೆರುಮಾಳ್ ದೇವಸ್ಥಾನದಲ್ಲಿ ಕಮಲಾ ಗೆಲುವಿಗಾಗಿ ಪ್ರಾರ್ಥಿಸಿದ್ದರು.

ಆದರೆ, ಹೊತ್ತುಕಳೆದಂತೆ ಡೊನಾಲ್ಡ್‌ ಟ್ರಂಪ್‌ ಗೆಲುವು, ಕಮಲಾ ಸೋಲು ಸ್ಪಷ್ಟವಾಗತೊಡಗಿತು. ಗ್ರಾಮದಲ್ಲೂ ನಿರಾಸೆ ಆವರಿಸಿತು. ಟಿ.ವಿಯಿಂದ ವಿಮುಖರಾದರು.

ಗ್ರಾಮದ ಡಿಎಂಕೆ ಮುಖಂಡ ಜೆ.ಸುಧಾಕರ್, ‘ಕಮಲಾ ಗೆಲ್ಲಬಹುದು ಎಂದು ನಾವು ಭಾವಿಸಿದ್ದೆವು. ವಿಜಯೋತ್ಸವಕ್ಕೂ ಚಿಂತನೆ ನಡೆಸಿದ್ದವು. ಪಟಾಕಿಗಳು ಸಿದ್ಧವಾಗಿದ್ದವು. ಆದರೆ, ಸೋಲು–ಗೆಲುವು ಬದುಕಿನ ಭಾಗ. ತೀವ್ರ ಸ್ಪರ್ಧೆ ಇತ್ತು. ಕಮಲಾ ಸೋತಿರಬಹುದು. ಅವರು ನೀಡಿದ ಸ್ಪರ್ಧೆಯನ್ನು ಮರೆಯಲಾಗದು’ ಎಂದು ಫಲಿತಾಂಶವನ್ನು ಅವಲೋಕಿಸಿದರು.

ಸ್ಥಳೀಯರಾದ ಅಂಬರಸು, ಚುನಾವಣೆಯಲ್ಲಿ ಗೆಲ್ಲುತ್ತಾರೆ. ಗ್ರಾಮಕ್ಕೂ ಭೇಟಿ ನೀಡುತ್ತಾರೆ ಎಂದು ಭಾವಿಸಿದ್ದೆವು. ಖಂಡಿತವಾಗಿಯೂ ಅವರು ಮುಂದೆ ಗೆಲ್ಲುತ್ತಾರೆ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.