ನವದೆಹಲಿ: ರೈತರ ಪ್ರತಿಭಟನೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೆಲವು ದಿನಗಳ ನಂತರ, ಬಿಜೆಪಿ ಸಂಸದೆ ಕಂಗನಾ ರನೌತ್ ಗುರುವಾರ ಪಕ್ಷದ ರಾಷ್ಟ್ರೀಐ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾದರು.
ಸೇನೆ ಹಾಗೂ ಪೊಲೀಸರು ಇಲ್ಲದಿದ್ದರೆ ಬಾಂಗ್ಲಾದೇಶದಲ್ಲಿ ನಡೆಯಿತಲ್ಲಾ ಅದು ಇಲ್ಲಿ ಸಂಭವಿಸಲು ಹೆಚ್ಚು ಸಮಯ ಬೇಕಿರಲಿಲ್ಲ. ರೈತರ ಮಸೂದೆ ವಾಪಾಸ್ ಪಡೆದ ನಂತರವೂ ಅವರು ಅಲ್ಲಿ ಕುಳಿತಿದ್ದರು. ಅವರಿಗೆ ಮಸೂದೆ ಹಿಂಪಡೆಯುತ್ತಾರೆ ಎಂಬ ಕಲ್ಪನೆಯೇ ಇರಲಿಲ್ಲ’ ಎಂದು ಕಂಗಾನ ಅವರು ಹೇಳಿಕೆ ನೀಡಿದ್ದರು.
ಕಂಗನಾ ಹೇಳಿಕೆಯಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಕಂಗನಾ ಅವರ ಹೇಳಿಕೆ ವೈಯಕ್ತಿಕವಾದುದು, ಅವರ ಹೇಳಿಕೆಗೂ ಹಾಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ಹೇಳಿ ನೀಡಿತ್ತು. ಭವಿಷ್ಯದಲ್ಲಿ ಈ ರೀತಿಯ ಯಾವುದೇ ಹೇಳಿಕೆ ನೀಡದಂತೆ ಬಿಜೆಪಿ ಅವವರಿಗೆ ಸೂಚನೆ ನೀಡಿತ್ತು.
ಈ ಘಟನೆ ಬಳಿಕ ಕಂಗನಾ ಅವರು ಎರಡನೇ ಸಲ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.