ADVERTISEMENT

ಪಂಜಾಬ್‌ನ ಉಗ್ರವಾದದ ಕೊನೆ ಎಂದು?: ಕಪಾಳಮೋಕ್ಷದ ಬಳಿಕ ಕಂಗನಾ ಕಳವಳ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2024, 15:33 IST
Last Updated 6 ಜೂನ್ 2024, 15:33 IST
<div class="paragraphs"><p>ಕಂಗನಾ ರನೌತ್‌</p></div>

ಕಂಗನಾ ರನೌತ್‌

   

ನವದೆಹಲಿ: ‘ಪಂಜಾನಲ್ಲಿ ಬೆಳೆಯುತ್ತಿರುವ ಈ ರೀತಿಯ ಉಗ್ರವಾದವನ್ನು ಕೊನೆಗೊಳಿಸುವುದು ಹೇಗೆ’ ಎಂದು ನಟಿ, ನೂತನ ಸಂಸದೆ ಕಂಗನಾ ರನೌತ್‌ ಪ್ರಶ್ನಿಸಿದ್ದಾರೆ.

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಮಂಡಳಿಯ ಕಾನ್‌ಸ್ಟೆಬಲ್‌ ಕಪಾಳಮೋಕ್ಷ ಮಾಡಿದ ಘಟನೆಯ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಕಂಗನಾ, ‘ನಾನು ಸುರಕ್ಷಿತವಾಗಿದ್ದೇನೆ. ಭದ್ರತಾ ತಪಾಸಣೆ ವೇಳೆ ಸಿಐಎಸ್‌ಎಫ್‌ನ ಮಹಿಳಾ ಸಿಬ್ಬಂದಿಯೊಬ್ಬರು ಕ್ಯಾಬಿನ್‌ನಿಂದ ಹೊರಹೋಗುತ್ತಿದ್ದಂತೆ ಕಪಾಳಕ್ಕೆ ಹೊಡೆದು ಅವಹೇಳನ ಮಾಡಿದರು. ಯಾಕೆ ಈ ರೀತಿ ಮಾಡಿದಿರಿ ಎಂದು ಕೇಳಿದಾಗ, ‘ಈ ಹಿಂದೆ ನಡೆದ ರೈತರ ಹೋರಾಟವನ್ನು ನಾನು ಬೆಂಬಲಿಸುತ್ತೇನೆ’ ಎಂದು ಉತ್ತರಿಸಿದರು. ಪಂಜಾಬ್‌ನಲ್ಲಿ ಬೆಳೆಯುತ್ತಿರುವ ಈ ರೀತಿಯ ತೀವ್ರವಾದ ಹಾಗೂ ಉಗ್ರವಾದವನ್ನು ಕೊನೆಗಾಣಿಸುವುದು ಹೇಗೆ ಎನ್ನುವುದು ನನ್ನ ಪ್ರಶ್ನೆ’ ಎಂದು ಕೇಳಿದ್ದಾರೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಐಎಸ್‌ಎಫ್‌ ಕಾನ್‌ಸ್ಟೆಬಲ್ ‘ರೈತರು ₹100 ಅಥವಾ ₹200 ನೀಡಿದ್ದರಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಂಗನಾ ಈ ಹಿಂದೆ ಹೇಳಿಕೆ ನೀಡಿದ್ದರು. ಆ ಸಮಯದಲ್ಲಿ ನನ್ನ ತಾಯಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು’ ಎಂದಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಕಂಗನಾ ಗೆದ್ದಿದ್ದಾರೆ. ಚಂಡೀಗಢದಿಂದ ದೆಹಲಿಗೆ ಪ್ರಯಾಣಿಸಲು ಇವರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಕುಲ್ವಿಂದರ್‌ ಕೌರ್‌ ಎನ್ನುವ ಕಾನ್‌ಸ್ಟೆಬಲ್ ಕಪಾಳಮೋಕ್ಷ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.