ADVERTISEMENT

ಕೃಷಿ ಕಾನೂನುಗಳನ್ನು ಮರು ಜಾರಿ ಮಾಡಬೇಕೆಂದು ಹೇಳಿ ಉಲ್ಟಾ ಹೊಡೆದ ಕಂಗನಾ

ಪಿಟಿಐ
Published 25 ಸೆಪ್ಟೆಂಬರ್ 2024, 9:39 IST
Last Updated 25 ಸೆಪ್ಟೆಂಬರ್ 2024, 9:39 IST
<div class="paragraphs"><p>ಕಂಗನಾ ರನೌತ್</p></div>

ಕಂಗನಾ ರನೌತ್

   

ಚಿತ್ರಕೃಪೆ: ಇನ್‌ಸ್ಟಾಗ್ರಾಂ

ಶಿಮ್ಲಾ: ರೈತರ ಪ್ರತಿಭಟನೆಗಳ ಕಾರಣ 2021ರಲ್ಲಿ ರದ್ದಾಗಿರುವ ಮೂರು ಕೃಷಿ ಕಾಯ್ದೆಗಳನ್ನು ಮರಳಿ ತರುವಂತೆ ಆಗ್ರಹಿಸಿದ್ದ ಬಿಜೆಪಿ ಸಂಸದೆ ಕಂಗನಾ ರನೌತ್‌ ಅವರು ಬುಧವಾರ ತಮ್ಮ ಈ ಹೇಳಿಕೆಯನ್ನು ವಾಪಸ್‌ ಪಡೆದು, ವಿಷಾದ ವ್ಯಕ್ತಪಡಿಸಿದ್ದಾರೆ.

ADVERTISEMENT

ಮಂಡಿಯಲ್ಲಿ ಮಂಗಳವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ‘ಮೂರು ಕೃಷಿ ಕಾಯ್ದೆಗಳನ್ನು ಆಕ್ಷೇಪಿಸಿ ದೇಶದ ಕೆಲವೇ ರಾಜ್ಯಗಳಲ್ಲಿ ರೈತರ ಪ್ರತಿಭಟನೆ ನಡೆದಿತ್ತು. ಹೀಗಾಗಿ ಹಿಂಪಡೆಯಲಾಗಿರುವ ಈ ಮೂರು ಕೃಷಿ ಕಾನೂನುಗಳನ್ನು ರೈತರ ಹಿತಕ್ಕಾಗಿ ಮತ್ತೆ ತರುವಂತೆ’ ಒತ್ತಾಯಿಸಿದ್ದರು.

ಮಂಡಿಯ ಸಂಸದೆ ಮತ್ತು ನಟಿ ಕಂಗನಾ ಅವರ ಈ ಹೇಳಿಕೆಯಿಂದ ಹಿಮಾಚಲ ಪ್ರದೇಶದ ಬಿಜೆಪಿ ಘಟಕ ಅಂತರ ಕಾಯ್ದುಕೊಂಡಿತ್ತು.

ತನ್ನ ಮಾತುಗಳಿಗೆ ವಿರೋಧ ಪಕ್ಷಗಳು, ರೈತರ ಮುಖಂಡರಿಂದ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ, ‘ಎಕ್ಸ್‌’ನಲ್ಲಿ 68 ಸೆಕೆಂಡ್‌ಗಳ ವಿಡಿಯೊ ಪೋಸ್ಟ್‌ ಮಾಡಿರುವ ಅವರು, ‘ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯಗಳು ವೈಯಕ್ತಿಕವಾದವು. ಇವು ಈ ಕಾಯ್ದೆಗಳ ಕುರಿತ ಬಿಜೆಪಿ ನಿಲುವಲ್ಲ’ ಎಂದು ಹೇಳಿದ್ದಾರೆ.

ಉಚ್ಚಾಟನೆಗೆ ಆಗ್ರಹ:

‘ರದ್ದಾಗಿರುವ ಕೃಷಿ ಕಾಯ್ದೆಗಳನ್ನು ಮತ್ತೆ ತರುವ ಯೋಜನೆ ವ್ಯಕ್ತಪಡಿಸಿರುವ ಬಿಜೆಪಿ ಸಂಸದೆಯನ್ನು ಪಕ್ಷದಿಂದ ಉಚ್ಚಾಟಿಸಬೇಕು’ ಎಂದು ಕಾಂಗ್ರೆಸ್‌ ಆಗ್ರಹ ಮಾಡಿದೆ. ಅಲ್ಲದೆ ಈ ಕಾಯ್ದೆಗಳು ಮರು ಜಾರಿಯಾಗಲು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬಿಡುವುದಿಲ್ಲ ಎಂದು ಅವರು ತಿಳಿಸಿದೆ.

ಬಿಜೆಪಿ ನೇತೃತ್ವದ ಸರ್ಕಾರವೇ ರದ್ದುಪಡಿಸಿದ್ದ ಕೃಷಿ ಕಾಯ್ದೆಗಳ ಬಗ್ಗೆ ಮಾತನಾಡುತ್ತಿರುವ ಅದರ ಸಂಸದೆ ವಿರುದ್ಧ ಅದು ಕ್ರಮ ತೆಗೆದುಕೊಳ್ಳಬೇಕು.
ಸರ್ವಾನ್‌ ಸಿಂಗ್‌ ಪಂಧೇರ್‌, ಕಿಸಾನ್‌ ಮಜ್ದೂರ್‌ ಮೋರ್ಚಾದ ನಾಯಕ
ಬಿಜೆಪಿಯವರು ತಮ್ಮ ವಿಚಾರಗಳನ್ನು ಈ ರೀತಿ ಪರೀಕ್ಷೆ ಮಾಡುತ್ತಿದ್ದಾರೆ. ಕಂಗನಾ ಅವರ ಹೇಳಿಕೆಗಳನ್ನು ಪ್ರಧಾನಿ ಮೋದಿ ವಿರೋಧಿಸುತ್ತಾರೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು.
ರಾಹುಲ್‌ ಗಾಂಧಿ, ಲೋಕಸಭಾ ವಿರೋಧ ಪಕ್ಷದ ನಾಯಕ
ಕಂಗನಾ ಹೇಳಿಕೆ ಖಂಡನೀಯ. ಹರಿಯಾಣ ಸೇರಿದಂತೆ ದೇಶದಲ್ಲಿ ಚುನಾವಣೆಗಳು ನಡೆಯುತ್ತಿರುವ ರಾಜ್ಯಗಳ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.